ಪ್ರಾತಿನಿಧಿಕ ಚಿತ್ರ
ಕನಕಗಿರಿ: ‘ನನ್ನ ಮಗನ ಸಾವಿಗೆ ಮೊಮ್ಮಗ ಹಾಗೂ ಆತನ ಪತ್ನಿ ಬಗ್ಗೆ ಅನುಮಾನ ಇದ್ದು ತನಿಖೆ ಮಾಡಬೇಕು’ ಎಂದು ಒತ್ತಾಯಿಸಿ ವೃದ್ದೆ ಸೂರಮ್ಮ ಮರಿಯಪ್ಪ ಹಂಚಿನಾಳ ಅವರು ಇಲ್ಲಿನ ಪಿಐ ಅವರಿಗೆ ದೂರು ನೀಡಿದ್ದಾರೆ.
ನನ್ನ ಮತ್ತು ನನ್ನ ಮಗ ಹಾಗೂ ಮೊಮ್ಮಗನ ನಡುವೆ ಆಸ್ತಿ ವಿವಾದ ನಡೆದಿತ್ತು, ನನ್ನನ್ನು ನೋಡಿಕೊಳ್ಳಲು ಬೇರೆ ಯಾರು ಇಲ್ಲದ ಕಾರಣ ಹೇರೂರು ಗ್ರಾಮದಲ್ಲಿರುವ ನನ್ನ ಮೊದಲು ಮಗಳು ದೇವಮ್ಮ ವೆಂಕಟೇಶ ಅವರ ನಾನು ಮನೆಯಲ್ಲಿ ಕಳೆದ 2 ವರ್ಷದಿಂದ ವಾಸವಿದ್ದೇನೆ. ವರ್ನಖೇಡ ಗ್ರಾಮದ ಬಸಪ್ಪ ಪಡಚಟ್ಟಿ ನನ್ನ ಮಗಳಿಗೆ ಕರೆ ಮಾಡಿ ನನ್ನ ಮಗ ಯಂಕೋಬ ಮರಿಯಪ್ಪ (50) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ತಿಳಿಸಿದ್ದಾರೆ.
ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಗ್ರಾಮಕ್ಕೆ ಹೋಗಿ ನೋಡಿದಾಗ ನನ್ನ ಮಗನ ಬಾಯಿಯಲ್ಲಿ ಬುರುಗು ಬಂದಿರುವದು ಕಂಡು ಬಂದಿದೆ. ನನ್ನ ಮಗನ ಸಾವಿನ ಬಗ್ಗೆ ನನ್ನ ಮೊಮ್ಮಗನಾದ ಈರಣ್ಣ ಮತ್ತು ಈತನ ಹೆಂಡತಿ ಸವಿತಾ ಈರಣ್ಣ ಅವರ ಮೇಲೆ ಅನುಮಾನವಿದೆ’ ಎಂದು ಸೂರಮ್ಮ ದೂರು ನೀಡಿದ್ದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.