ADVERTISEMENT

ಕನಕಗಿರಿ | ಗಾಳಿಯಂತ್ರದ ಟ್ಯಾಂಕ್ ಸಿಡಿದು ಗಾಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:34 IST
Last Updated 23 ಜೂನ್ 2025, 15:34 IST

ಕನಕಗಿರಿ: ಪಂಚರ್ ಹಾಕುವ ಏರ್ ಟ್ಯಾಂಕ್ ಸಿಡಿದು ಯುವಕನೊಬ್ಬ ಗಾಯಗೊಂಡ ಘಟನೆ ಸಮೀಪದ ವಡಕಿ ಕ್ರಾಸ್‌ನಲ್ಲಿ ಸೋಮವಾರ ನಡೆದಿದೆ. ತಾಲ್ಲೂಕಿನ ವಡಕಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡು‌ ಜೀವನ ಸಾಗಿಸುತ್ತಿದ್ದ ಯಂಕನಗೌಡ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.

ಪಂಚರ್ ಹಾಕಲು ಏರ್ ಟ್ಯಾಂಕ್‌ಗೆ ಸಾಮರ್ಥ್ಯ ಮೀರಿ ಹವಾ ತುಂಬಿದ್ದರಿಂದ ಏಕಾಏಕಿ ಟ್ಯಾಂಕ್ ಸಿಡಿದು ಗಾಳಿ ರಭಸಕ್ಕೆ ಕೈ ಮೂಳೆ ಮುರಿದು ಕಣ್ಣಿಗೆ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT