
ಕಾರಟಗಿ: ‘ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರು, ಶ್ರಮಿಕರು ಸಹಿತ ಇತರ ವರ್ಗದ ಜನಸಾಮಾನ್ಯರಿಂದ ಮಾತ್ರ ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿ ಉಳಿದಿದೆ’ ಎಂದು ಜಾನಪದ ಕಲಾವಿದ ವೆಂಕಟೇಶ ಮೋಡಿಕಾರ ಹೇಳಿದರು.
ಸಮೀಪದ ಬೇವಿನಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳು ಓದು, ಬರಹ, ಲೆಕ್ಕದ ಜೊತೆಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಜೀವನ ಪಾಠ ಕಲಿಸುತ್ತಿವೆ. ಅದಕ್ಕಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಪೋಷಿಸುವ ಜವಾಬ್ದಾರಿತನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ’ ಎಂದರು.
ರೈತ ಮಹಿಳೆ ಮಲ್ಲಮ್ಮ, ಹಳ್ಳಿ ಸೊಗಡಿನ ಜಾನಪದ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಶಾಲೆಯ ಮುಖ್ಯಗುರು ಕಳಕೇಶ ಡಿ. ಗುಡ್ಲಾನೂರ , ಎಸ್‌ಡಿಎಂಸಿ ಸದಸ್ಯರು, ಶಿಕ್ಷಣಪ್ರೇಮಿಗಳು, ಶಾಲೆಯ ಹಳೆಯ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ಅಂಬಮ್ಮ, ಸುನೀತಾ, ರೇಣುಕಾ, ರೇಖಾ, ಸಿಬ್ಬಂದಿ ಉಪಸ್ಥಿತರಿದ್ದರು.
ಪುರಸಭೆ: ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಅಧಿಕಾರಿಗಳು, ಸಿಬ್ಬಂದಿ, ಕನ್ನಡಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಕರುನಾಡ ಸೇವಕರ ಸಂಘ: ಪಟ್ಟಣದ ನೂತನ ಬಸ್ ನಿಲ್ದಾಣದ ಎದುರಿಗೆ ಕರುನಾಡ ಸೇವಕರ ಸಂಘಟನೆ ಹಾಗೂ ಕರವೇ (ಪ್ರವೀಣ ಶೆಟ್ಟಿ ಬಣ) ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರೇಮಠದ ಮರುಳಸಿದ್ದಯ್ಯಸ್ವಾಮಿ, ಕರುನಾಡ ಸೇವಕರ ಸಂಘಟನೆಯ ಜಿಲ್ಲಾಧ್ಯಕ್ಷ ರಾಮುಲು ನಾಯಕ ನಾಡಿಗೇರ, ಕರವೇ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್ ನಾಯಕ ಜೂರಟಗಿ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ಮಾಡಿದರು.
ಜಿಲ್ಲಾಧ್ಯಕ್ಷ ರಾಮುಲು ನಾಯಕ ನಾಡಿಗೇರ, ಹಿರೇಮಠದ ಮರುಳಸಿದ್ದಯ್ಯ ಸ್ವಾಮಿ, ತಾ.ಪಂ ಮಾಜಿ ಸದಸ್ಯ ತಿಪ್ಪಣ್ಣ ನಾಯಕ ಮರ್ಲಾನಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಹಾಗೂ ದೇವರಾಜ ನಾಯಕ ಜೂರಟಗಿ ಮಾತನಾಡಿದರು. ಸಂಘಕ್ಕೆ ನೂತನ ತಾಲ್ಲೂಕಾಧ್ಯಕ್ಷರಾಗಿ ನೇಮಕವಾದ ವೀರೇಶ ನಾಯಕರನ್ನು ಸನ್ಮಾನಿಸಲಾಯಿತು.
ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಾಬುಗೌಡ, ಪ್ರಧಾನ ಕಾರ್ಯದರ್ಶಿ ಮುದ್ದು ನಾಯಕ, ಸಹ ಕಾರ್ಯದರ್ಶಿ ನೆಹರೂ ನಾಯಕ, ಅವಿನಾಶ ನಾಯಕ, ಶಶಾಂಕ ಜೂರಟಗಿ, ಶುಕ್ರಂ ಅಹಮದ್, ಎಎಸ್‍ಐ ಭೋರಣ್ಣನವರ್, ಹುಲಿರಾಜ್ ತೊಂಡಿಹಾಳ, ಕರವೇ (ಎಚ್. ಶಿವರಾಮೇಗೌಡ ಬಣ) ತಾಲ್ಲೂಕಾಧ್ಯಕ್ಷ ಮಾರುತಿ ಹಡಪದ, ಕಾರ್ಯದರ್ಶಿ ವಿರುಪಾಕ್ಷಗೌಡ ಸಜ್ಜಿಹೊಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.