ಕನಕಗಿರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ನಿಮಿತ್ತ ಬುಧವಾರ ಕರಿ ಹರಿಯುವ ಸ್ಪರ್ಧೆ ನಡೆದರೆ ಪಟ್ಟಣದಲ್ಲಿ ನಕ್ಷತ್ರವನ್ನು ನೋಡಿಕೊಂಡು ಕಾರ ಹುಣ್ಣಿಮೆ ಆಚರಿಸುವ ಹಿನ್ನೆಲೆಯಲ್ಲಿ ಗುರುವಾರ ಎತ್ತುಗಳ ಮೆರವಣಿಗೆ ನಡೆಯಿತು.
ರೈತರ ಹಬ್ಬ ಎಂದು ಕರೆಯುವ ಕರಿ ಹಬ್ಬದಲ್ಲಿ ನೂರಾರು ರೈತರು ಬಹಳ ಸಂತೋಷದಿಂದ ಭಾಗವಹಿಸಿದ್ದರು. ಹಬ್ಬದ ನಿಮಿತ್ತ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ ಕೊಂಬುಗಳನ್ನು ಕೆತ್ತಿ, ಕೊಂಬುಗಳಿಗೆ ಬಾಸಿಂಗ್, ಬಲೂನ್ ಕಟ್ಟಿ, ವಿವಿಧ ಬಣ್ಣಗಳನ್ನು ಹಚ್ಚಿ, ಶೃಂಗರಿಸಿದ್ದರು.
ಇಲ್ಲಿನ ಅಗಸಿ ಆಂಜನೇಯ ದೇವಸ್ಥಾನ ಹಾಗೂ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಹನುಮಪ್ಪ ದೇವಸ್ಥಾನದಲ್ಲಿ ಕರಿ ಹರಿಯುವ ಸ್ಪರ್ಧೆ ನಡೆಸಲಾಯಿತು. 20ಕ್ಕೂ ಹೆಚ್ಚು ಎತ್ತುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಸ್ಪರ್ಧೆ ಮುಗಿದ ಮೇಲೆ ರೈತರು ತಮ್ಮ ಎತ್ತುಗಳನ್ನು ತೆಗೆದುಕೊಂಡು ಶ್ರೀ ಕನಕಾಚಲ ಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.