ADVERTISEMENT

ಕಾರಟಗಿ | ಅಧಿಕ ಯೂರಿಯಾ ಮಾರಾಟ: 2 ಅಂಗಡಿ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:02 IST
Last Updated 31 ಜುಲೈ 2025, 7:02 IST
<div class="paragraphs"><p>ಕಾರಟಗಿ ಹಾಗೂ ಸಿದ್ದಾಪುರದಲ್ಲಿ ಕೃಷಿ ಹಾಗೂ ಕಂದಾಯ ಅಧಿಕಾರಿಗಳು ವಿವಿಧ ಅಂಗಡಿಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು</p></div>

ಕಾರಟಗಿ ಹಾಗೂ ಸಿದ್ದಾಪುರದಲ್ಲಿ ಕೃಷಿ ಹಾಗೂ ಕಂದಾಯ ಅಧಿಕಾರಿಗಳು ವಿವಿಧ ಅಂಗಡಿಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು

   

ಕಾರಟಗಿ: ಈಗಾಗಲೇ ನೀಡಿರುವ ಸೂಚನೆಗಳನ್ನು ಪಾಲಿಸದೇ, ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ನೀಡಿ, ಕೃತಕ ಅಭಾವಕ್ಕೆ ಕಾರಣರಾದ ಪಟ್ಟಣದ 2 ಗೊಬ್ಬರದ ಅಂಗಡಿಗಳ ಪರವಾನಗಿಯನ್ನು ಬುಧವಾರ ರದ್ದುಪಡಿಸಲಾಗಿದೆ.

ಪಟ್ಟಣದ ಎಪಿ ರೌಡಕುಂದ ಆಯಂಡ ಕಂಪನಿ ಹಾಗೂ ತಾಲ್ಲೂಕಿನ ಸಿದ್ದಾಪುರದ ಜುವಾರಿ ಫಾರ್ಮ್‌ ಹಬ್‌ ಲಿಮಿಟೆಡ್‌ ಅವರ ಪರವಾನಗಿಯನ್ನು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್‌ ಪರವಾನಗಿಯನ್ನು ರದ್ದು ಮಾಡಿದ್ದಾರೆ.

ADVERTISEMENT

ತಹಶೀಲ್ದಾರ್‌ ಎಂ. ಕುಮಾರಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್‌, ಕೃಷಿ ಅಧಿಕಾರಿಗಳಾದ ನಾಗರಾಜ್‌, ಸುಧಾಕರ ಹಾಗೂ ಸಿಬ್ಬಂದಿ ವಿವಿಧ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.