ADVERTISEMENT

ಕಾರಟಗಿ: ಟ್ಯಾಕ್ಟರ್‌ ಡಿಕ್ಕಿ- ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:21 IST
Last Updated 7 ನವೆಂಬರ್ 2025, 7:21 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕಾರಟಗಿ: ರಸ್ತೆಯಲ್ಲಿ ತೆರಳುತ್ತಿದ್ದ ಯುವಕಗೆ ಹಿಂದಿನಿಂದ ಬಂದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕಕ್ಕರಗೋಳ- ಸಿದ್ದಾಪುರ ರಸ್ತೆಯ ಉಳೇನೂರ ಹಳ್ಳದ ಬಳಿ ಬುಧವಾರ ಜರುಗಿದೆ.

ADVERTISEMENT

ಮಲ್ಲಿಕಾರ್ಜುನ ವೀರಣ್ಣ ನಾಯಕ (20) ಮೃತಪಟ್ಟವರು.

ಮಲ್ಲಿಕಾರ್ಜುನ ಕಕ್ಕರಗೋಳನಿಂದ ಉಳೇನೂರಿಗೆ ಹೊರಟಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಟ್ರ್ಯಾಕ್ಟರ್‌ ಎಂಜಿನ್‌ ಮೇಲೆ ಬಿದ್ದಿದ್ದರಿಂದ ಬಲವಾದ ಗಾಯವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟ್ರ್ಯಾಕ್ಟರ್‌ ಚಾಲಕ ಪರಾರಿಯಾಗಿದ್ದಾನೆ. ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.