ADVERTISEMENT

ಕಾರಟಗಿ: ವಿವಿಧೆಡೆ ನುಲಿಯ ಚಂದಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:44 IST
Last Updated 10 ಆಗಸ್ಟ್ 2025, 2:44 IST
ಕಾರಟಗಿಯ ಪುರಸಭೆ ಕಾರ್ಯಾಲಯದಲ್ಲಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು
ಕಾರಟಗಿಯ ಪುರಸಭೆ ಕಾರ್ಯಾಲಯದಲ್ಲಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು   

ಕಾರಟಗಿ: ‘ಅಜ್ಞಾನ, ಮೂಡನಂಬಿಕೆಯಿಂದ ತುಂಬಿದ್ದ ಸಮಾಜವನ್ನು ತಮ್ಮ ವೈಚಾರಿಕ ಚಿಂತನೆಗಳೊಂದಿಗೆ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದ ಶರಣರಲ್ಲಿ ನುಲಿಯ ಚಂದಯ್ಯನವರಿಗೆ ಮಹತ್ವದ ಸ್ಥಾನವಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಶನಿವಾರ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಅಧ್ಯಕ್ಷ ನಾಗರಾಜ ಪ್ರಮುಖರಾದ ರಾಜಶೇಖರ ಆನೆಹೊಸೂರು, ಜಗದೀಶ ಭಜಂತ್ರಿ, ಹುಲ್ಲೇಶ, ಎಂ. ಗಂಗಪ್ಪ, ಮಲ್ಲಪ್ಪ, ಸಿಬ್ಬಂದಿ ಚನ್ನಬಸವ, ಪವನಕುಮಾರ, ಶರ್ಶಾದಖಾನ್, ಹನುಮೇಶ ಇದ್ದರು.

ADVERTISEMENT

ವಿವಿಧೆಡೆ ಆಚರಣೆ: ಪಟ್ಟಣದ 7ನೇ ವಾರ್ಡ್‌ನ ಹಳೆ ಸಂತೆ ಮಾರ್ಕೆಟ್, 12ನೇ ವಾರ್ಡ್‌ನ ರಾಜೀವ್ ಗಾಂಧಿನಗರ, 22ನೇ ವಾರ್ಡ್‌ನ ಅಬ್ದುಲ್ ನಜೀರಸಾಬ್ ಕಾಲೊನಿಯಲ್ಲಿ ನುಲಿಯ ಚಂದಯ್ಯ ಜಯಂತಿ  ಆಚರಿಸಲಾಯಿತು.

ಸಮಾಜದ ಹಿರಿಯರಾದ ಮರಿಯಪ್ಪ ಮೆದಿಕಿನಾಳ, ದುರ್ಗಪ್ಪ ಮೆದಿಕಿನಾಳ, ದೊಡ್ಡ ವೀರಣ್ಣ, ಜಯಣ್ಣ ಸ್ವಾಮಿ, ಸಂಘದ ಅಧ್ಯಕ್ಷ ನಾಗರಾಜ್ ಭಜಂತ್ರಿ, ಮಾಜಿ ಅಧ್ಯಕ್ಷ ಮಲ್ಲಪ್ಪ ಮೆದಿಕಿನಾಳ ಮುಖಂಡರಾದ ಸುರೇಶ ಆನೆಹೊಸೂರು, ಜಗದೀಶ ಭಜಂತ್ರಿ, ಗಂಗಪ್ಪ ಚಲವಾದಿ, ಉಪಾಧ್ಯಕ್ಷ ಹುಲ್ಲೇಶ್ ಭಜಂತ್ರಿ, ಸಹ ಕಾರ್ಯರ್ಶಿ ದುರ್ಗೇಶ್ ಚೀಟಿಪಿಟಿ, ಖಜಾಂಚಿ ವಿಜಯಕುಮಾರ, ಹನುಮಂತ ಬೇವುರ ಸಹಿತ ಸಮಾಜದ ಅನೇಕರು ಉಪಸ್ಥಿತರಿದ್ದರು.

ಕಾರಟಗಿಯ 7ನೇ ವಾರ್ಡ್‌ನ ಭಜಂತ್ರಿ ಓಣಿಯಲ್ಲಿ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.