ADVERTISEMENT

ಜನರ ಮಾತು ಕೇಳಿಸಿಕೊಳ್ಳದವರು ಅಸಮರ್ಥರು: ಪ್ರಿಯಾಂಕಾ ಗಾಂಧಿ

ಕನಕಗಿರಿಯಲ್ಲಿ ಚುನಾವಣಾ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಮೇ 2023, 16:08 IST
Last Updated 4 ಮೇ 2023, 16:08 IST
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಗುರುವಾರ ನಡೆದ ಪ್ರಿಯಾಂಕಾ ಗಾಂಧಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಗುರುವಾರ ನಡೆದ ಪ್ರಿಯಾಂಕಾ ಗಾಂಧಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ   

ಕನಕಗಿರಿ (ಕೊಪ್ಪಳ ಜಿಲ್ಲೆ): ‘ಪ್ರಧಾನಿ ನರೇಂದ್ರ ಮೋದಿ ಆಡುವ ಮಾತುಗಳನ್ನು ಜನರು ಕೇಳಬೇಕು. ಆದರೆ, ಜನರ ಮಾತು ಮೋದಿ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಕೇಳುತ್ತಿಲ್ಲ. ಅಂಥವರು ಜನನಾಯಕರಾಗಲು ಅಸಮರ್ಥರು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬೈಗುಳಗಳ ಬಗ್ಗೆ ಪ್ರಧಾನಿ ಅವರಿಗೆ ಚಿಂತೆ ಇದೆಯೇ ಹೊರತು ಉದ್ಯೋಗ, ಸೌಲಭ್ಯ, ಅಭಿವೃದ್ಧಿ ಕಲ್ಪಿಸಿ ಜನರ ಬದುಕು ಹಸನುಗೊಳಿಸುವ ಉದ್ದೇಶವಿಲ್ಲ. ಬಿಜೆಪಿ ಧರ್ಮ ಹಾಗೂ ಭಾವನಾತ್ಮಕ ವಿಷಯಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ’ ಎಂದರು.

‘ನಿಮ್ಮೆಲ್ಲರ ಗುರಿ ಮತ್ತು ಗಮನ ನಿಮ್ಮ ಭವಿಷ್ಯ ಭದ್ರಗೊಳಿಸುವ, ಬದುಕು ಸುಂದರಗೊಳಿಸುವ, ವಿಕಸನಕ್ಕೆ ಕೈ ಜೋಡಿಸುವವರತ್ತ ಇರಲಿ. ಮೇ 10ರಂದು ಮತದಾನಕ್ಕೆ ಹೋಗುವ ಮುನ್ನ ನಿಮ್ಮ ಮನೆಯಲ್ಲಿರುವ ಸಿಲಿಂಡರ್ ನೋಡಿ; ಅದರ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ಲೆಕ್ಕ ಹಾಕಿ. ಯಾರಿಗೆ ಮತ ಕೊಡಬೇಕು ಎಂಬುದನ್ನು ನಿರ್ಧರಿಸಿ’ ಎಂದರು.

ADVERTISEMENT
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಗುರುವಾರ ಪ್ರಿಯಾಂಕಾ ಗಾಂಧಿ ಮಾತನಾಡಿದರು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.