ADVERTISEMENT

ಕೊಪ್ಪಳ: ಅಂಬೇಡ್ಕರ್‌ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:24 IST
Last Updated 27 ಏಪ್ರಿಲ್ 2025, 16:24 IST
ಕೊಪ್ಪಳದಲ್ಲಿ ಭಾನುವಾರ ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಆಚರಿಸಲಾಯಿತು
ಕೊಪ್ಪಳದಲ್ಲಿ ಭಾನುವಾರ ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಆಚರಿಸಲಾಯಿತು   

ಕೊಪ‍್ಪಳ: ನಗರದಲ್ಲಿ ಭಾನುವಾರ ಜಿಲ್ಲಾ ಹಾಗೂ ತಾಲ್ಲೂಕು ಚೆನ್ನದಾಸರ ಸಮುದಾಯದ ವತಿಯಿಂದ ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಮತ್ತು ಬಾಬು ಜಗಜೀವನ್ ರಾಂ ಅವರ ಜಯಂತಿ ಆಚರಿಸಲಾಯಿತು.

ಸಮುದಾಯದ ಮುಖಂಡರು ಹಾಗೂ ಮಹಿಳೆಯರು ಭೀಮ ಘೋಷಣೆಗಳನ್ನು ಮೊಳಗಿಸಿ ಮೆರವಣಿಗೆ ಮಾಡಿದರು. ಬಳಿಕ ಮಹನೀಯರಿಗೆ ಮಾಲಾರ್ಪಣೆ ಮಾಡಲಾಯಿತು.

ADVERTISEMENT

ದಲಿತ ನಾಯಕ ಪರಶುರಾಮ್ ಕೆರಹಳ್ಳಿ, ಚೆನ್ನದಾಸರ ಸಮುದಾಯದ ಮುಖಂಡರಾದ ಶೇಷಣ್ಣ ಶಹಪುರ ಯಂಕಪ್ಪ ಕಟ್ಟಿಮನಿ, ನಾಗಪ್ಪ ಚುಕನಕಲ, ವೆಂಕಟೇಶ ಕೌಜಗೇರಿ, ವೆಂಕಟೇಶ್ ಕಟ್ಟಿಮನಿ, ಮಾರುತಿ ಕಟ್ಟಿಮನಿ, ಚಂದ್ರು ಕಟ್ಟಿಮನಿ, ಕನಕಪ್ಪ ಜೀರಾಳ, ಸುಮಿತ್ರಾ ಕಟ್ಟಿಮನಿ, ಹನುಮಂತಮ್ಮ ಕಟ್ಟಿಮನಿ, ಲಲಿತಾ ಕಟ್ಟಿಮನಿ, ಅಕ್ಕಮ್ಮ ಕಟ್ಟಿಮನಿ, ಕೃಷ್ಣವೇಣಿ, ಸವಿತಾ ಸಂಜಯದಾಸ್ ಕೌಜಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.