ಪ್ರಜಾವಾಣಿ ವಾರ್ತೆ
ಕೊಪ್ಪಳ: ಕೃಷಿ ಚಟುವಟಿಕೆ ಸಲುವಾಗಿ ಅಗತ್ಯವಾಗಿದ್ದ ಮಳೆ ಎರಡು ದಿನಗಳಿಂದ ಬೀಳುತ್ತಿದ್ದು ರೈತರಲ್ಲಿ ಮಂದಹಾಸ ಮೂಡಿದೆ. ಶುಕ್ರವಾರ ಸಂಜೆ ನಗರದಲ್ಲಿ ಬಿರುಸಿನ ಮಳೆ ಸುರಿಯಿತು.
ಸಂಜೆ ವೇಳೆ ಮಳೆ ಸುರಿದಿದ್ದರಿಂದ ನಿತ್ಯದ ಕೆಲಸ ಮುಗಿಸಿ ಮನೆಗೆ ಹೋಗುವವರು, ಮಾರುಕಟ್ಟೆಗೆ ಬಂದವರು ಮಳೆಯಲ್ಲಿ ಸಿಲುಕಬೇಕಾಯಿತು. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನ ಮಳೆಗಾಗಿ ಕಾಯುತ್ತಿದ್ದರು. ಮುಂಗಾರು ಪೂರ್ವದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿತ್ತು. ಮುಂಗಾರಿನ ಮೊದಲ ತಿಂಗಳಾದ ಜೂನ್‌ನಲ್ಲಿ ಮಳೆ ಕೊರತೆ ಕಾಡಿದ್ದು, ಇತ್ತೀಚೆಗಿನ ನಾಲ್ಕೈದು ದಿನಗಳಿಂದ ಮಳೆ ಬರುತ್ತಿದೆ. ಕೃಷಿ ಚಟುವಟಿಕೆಗೆ ಪೂರಕವಾಗಿದ್ದು ರೈತರಲ್ಲಿ ಖುಷಿ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.