ADVERTISEMENT

ಪಿಂಜಾರ್‌ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿ: ಮೊಹಮ್ಮದ್ ಸಿರಾಜ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 10:34 IST
Last Updated 23 ಜುಲೈ 2024, 10:34 IST
ಪಿಂಜಾರ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಬಿಡುಗಡೆಗೊಳಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು
ಪಿಂಜಾರ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಬಿಡುಗಡೆಗೊಳಿಸುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು   

ಕುಕನೂರು: ಪಿಂಜಾರ, ನದಾಫ್ ಹಾಗೂ ಇತರ ಹದಿಮೂರು ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಾರದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಮುಖಂಡ ಮೊಹಮ್ಮದ್ ಸಿರಾಜ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಹೋರಾಟ ಅನಿವಾರ್ಯ. ಹಿಂದುಳಿದ ಸಮಾಜಗಳಿಗೆ ಘೋರ ಅನ್ಯಾಯ ಎಸುಗುತ್ತಿರುವ ಬಗ್ಗೆ ರಾಜ್ಯಾದ್ಯಂತ ಸಾರ್ವಜನಿಕರ ಗಮನಕ್ಕೆ ತರಲು ಪ್ರತಿಭಟನೆ ಮಾಡಲಾಗುವುದು ಎಂದರು.

ADVERTISEMENT

ರಾಜ್ಯ ಸಮಿತಿ ಸದಸ್ಯ ಎ.ಪಿ. ಮುಧೋಳ ಮಾತನಾಡಿ, ನಮ್ಮ ಪಿಂಜಾರ, ನದಾಫ್‌ ಹಾಗೂ ಇನ್ನೂ ಇತರ ಹದಿಮೂರು ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇದ್ದರೂ ಅನುದಾನ ನೀಡುತ್ತಿಲ್ಲ. ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದಿದ್ದು ಕಡುಬಡತನದಿಂದ ಕಷ್ಟಕರ ಜೀವನ ನಡೆಸುತ್ತಿರುವ ಸಮಾಜವಾಗಿದೆ. ಆದಷ್ಟು ಬೇಗ ಮುಖ್ಯಮಂತ್ರಿಗಳು ನಮಗೆ ಅನುದಾನ ನೀಡಬೇಕು ಎಂದರು.

ದಸ್ತಗಿರಿಸಾಬ್ ರಾಜೂರು, ಹುಸೇನಸಾಬ್ ನದಾಫ್, ಫಕೀರ್‌ಸಾಬ್ ರಾಜೂರ, ಮಹಮ್ಮದ್ ಅಲಿ ಅರಕೇರಿ, ಬಾಬುಸಾಬ್ ಬ್ಯಾಡಗಿ, ಕಲಂದರ್ ಸಾಬ ನೂರಬಾಷಾ, ಮಲಿಕಸಾಬ ನೂರಬಾಷ, ಶಮಿ ಶಾದ್ ಬೇಗಂ, ರಜಿಯಾ ಬೇಗಂ, ರಿಜ್ವಾನ್ ನದಾಫ, ಜುಬೇದಾಬೇಗಂ, ಅಬ್ಬಾಸ ಅಲಿ ವೆಂಕಟಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.