ಕಾರಟಗಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಚಾರ ಮಾಡಿದ ಘಟನೆ ತಾಲ್ಲೂಕಿನ ಗುಂಡೂರಕ್ಯಾಂಪ್‌ನಲ್ಲಿ ಜರುಗಿದ್ದು, ಫೋಕ್ಸೊ ಪ್ರಕರಣ ದಾಖಲಾಗಿದೆ.
ಮದುವೆ ಆಗುವುದಾಗಿ ನಂಬಿಸಿ, ಅತ್ಯಾಚಾರ ನಡೆಸಿದ ಘಟನೆ ಜ. 25ರಂದು ಜರುಗಿತ್ತು. ಮಾನ ತಗೆಯುವುದಾಗಿ ಹೆದರಿಸಿ ನಾಲ್ಕೈದು ಬಾರಿ ಅತ್ಯಾಚಾರ ಮಾಡಿದ್ದ. ಬಳಿಕ ಮುಟ್ಟು ಆಗದೇ ಇರುವುದರಿಂದ ಪರೀಕ್ಷೆ ಮಾಡಿಸಿದಾಗ ಗರ್ಭಿಣಿಯಾಗಿರುವುದು ಬಯಲಾಗಿದೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.