ಕುಷ್ಟಗಿಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಜೋಡಿಗಳು ಒಂದಾದವು
ಕುಷ್ಟಗಿ: ಇಲ್ಲಿಯ ವಿವಿಧ ನ್ಯಾಯಾಲಯದಲ್ಲಿ ಶನಿವಾರ ನಡೆದ ‘ರಾಷ್ಟ್ರೀಯ ಲೋಕ್ ಅದಾಲತ್‌ನಲಲ್ಲಿ ಒಟ್ಟು 7 ಕೌಟುಂಬಿಕ ವ್ಯಾಜ್ಯಗಳು ರಾಜಿ ಸಂದಾನದ ಮೂಲಕ ಇತ್ಯರ್ಥಗೊಂಡಿದ್ದು ಏಳು ಜೋಡಿ ದಂಪತಿ ವ್ಯಾಜ್ಯ ಮರೆತು ಪುನಃ ಕೂಡಿ ಬಾಳಲು ಒಪ್ಪಿಕೊಂಡ ಪ್ರಸಂಗ ನಡೆಯಿತು.
ಹಿಂದೂ ಮದುವೆ ಕಾನೂನಿನ ಅನ್ವಯ ಹಿರಿಯ ಸಿವಿಲ್ ನ್ಯಾಯಾಲದಲ್ಲಿ 6 ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಒಂದು ಪ್ರಕರಣಗಳಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತು ವಕೀಲರ ಮಧ್ಯಸ್ಥಿಕೆಯಲ್ಲಿ ರಾಜೀಸಂಧಾನ ಏರ್ಪಟ್ಟಿದೆ. ನ್ಯಾಯಾಲಯಗಳಲ್ಲಿ 7,476 ಪ್ರಕರಣಗಳು ಬಾಕಿ ಇದ್ದು ಅವುಗಳ ಪೈಕಿ 1,828 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಗಿತ್ತು. ಅವುಗಳಲ್ಲಿ 874 ಪ್ರಕರಣಗಳು ಇತ್ಯರ್ಥ ಹೊಂದಿದ್ದು ₹2.65 ಕೋಟಿ ಪರಿಹಾರಕ್ಕೆ ಆದೇಶಿಸಲಾಗಿದೆ.
ಬ್ಯಾಂಕ್ ವಸೂಲಾತಿಗೆ ಸಂಬಂದಿಸಿದ ವ್ಯಾಜ್ಯ ಪೂರ್ವ ಎರಡು ಪ್ರಕರಣಗಳು ಇತ್ಯರ್ಥಗೊಂಡಿದ್ದು ₹2.95 ಲಕ್ಷ ಸಾಲ ವಸೂಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಳಗಿ, ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಉಪಸ್ಥಿತರಿದ್ದರು. ಅನೇಕ ವಕೀಲರು, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.