ADVERTISEMENT

ಶ್ರದ್ಧಾ, ಭಕ್ತಿಯ ಮಧ್ವನವಮಿ ಉತ್ಸವ

ಕುಷ್ಟಗಿ: ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 11:29 IST
Last Updated 21 ಫೆಬ್ರುವರಿ 2021, 11:29 IST
ಕುಷ್ಟಗಿಯ ಅಡವಿಮುಖ್ಯಪ್ರಾಣ ದೇವಸ್ಥಾನದಲ್ಲಿ ಭಾನುವಾರ ಮಧ್ವನವಮಿ ಉತ್ಸವದ ಪ್ರಯುಕ್ತ ರಥೋತ್ಸವ ನೆರವೇರಿತು
ಕುಷ್ಟಗಿಯ ಅಡವಿಮುಖ್ಯಪ್ರಾಣ ದೇವಸ್ಥಾನದಲ್ಲಿ ಭಾನುವಾರ ಮಧ್ವನವಮಿ ಉತ್ಸವದ ಪ್ರಯುಕ್ತ ರಥೋತ್ಸವ ನೆರವೇರಿತು   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಮಧ್ವನವಮಿ ಉತ್ಸವವು ಶ್ರದ್ಧಾ, ಭಕ್ತಿಯಿಂದ ನೆರವೇರಿತು.

ಇಲ್ಲಿಯ ಅಡವಿಮುಖ್ಯಪ್ರಾಣ ದೇವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಪುನಶ್ಚರಣ, ಪಂಚಾಮೃತ ಅಭಿಷೇಕ, ಪವಮಾನ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನಂತರ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಪುಷ್ಪಾಲಂಕೃತ ರಥದಲ್ಲಿ ಇರಿಸಿ ಉತ್ಸವವನ್ನು ಸಂಭ್ರಮದೊಂದಿಗೆ ನಡೆಸಲಾಯಿತು.

ADVERTISEMENT

ಪಟ್ಟಣ ಸೇರಿದಂತೆ ಸುತ್ತಲಿನ ಅನೇಕ ಊರುಗಳ ಅನೇಕ ಭಕ್ತರು, ಮಹಿಳೆಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಗುರುರಾಜ ಭಜನಾ ಮಂಡಳಿ, ರಮಾ ಭಜನಾ ಮಂಡಳಿ, ಅಡವಿಮುಖ್ಯ ಪ್ರಾಣೇಶ ಭಜನಾ ಮಂಡಳಿ ಸದಸ್ಯರು ರಥೋತ್ಸವದ ವೇಳೆ ದೇವರನಾಮಗಳನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಅಡವಿಮುಖ್ಯಪ್ರಾಣ ದೇವಸ್ಥಾನ ಸಮಿತಿ ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯಿ, ಪ್ರಹ್ಲಾದಾಚಾರ ಸೌದಿ, ಅಡವಿರಾವ ತಿಕೋಟಿಕರ, ಜಯತೀರ್ಥ ಸೌದಿ, ಶ್ರೀನಿವಾಸ ಜೋಷಿ, ಶೇಷಗಿರಿಯಾಚಾರ, ಮಾಧವಾಚಾರ ದೀವಾನಜಿ, ಶ್ರೀನಿವಾಸಾಚಾರ, ಪ್ರಹ್ಲಾದಾಚಾರ ಹಂಜಕ್ಕಿ, ಶ್ರೀನಿವಾಸ ಹಳ್ಳೂರು, ಶ್ರೀನಿವಾಸಾಚಾರ ಆಚಾರ, ಧೀರೇಂದ್ರಾಚಾರ ಮಠದ, ಹನುಮೇಶಾಚಾರ ವಜ್ರಬಂಡಿ, ಅಡವಿರಾವ ಕಲಭಾವಿ, ಹನುಮೇಶ ಡಬೇರ, ಶ್ರೀಹರಿ ಆಶ್ರೀತ್, ಶ್ರೀಕಾಂತ ಕುಲಕರ್ಣಿ, ರಾಘವೇಂದ್ರ ದಿಗ್ಗಾವಿ, ಮುರಳೀಧರ ಮುಕ್ತೇದಾರ, ಪ್ರಹ್ಲಾದ ದಂಡಿನ, ವಿಜಯೇಂದ್ರ ದೇಸಾಯಿ, ಪ್ರಹ್ಲಾದಾಚಾರ ಆಚಾರ, ಗುರುರಾಜ ಆಶ್ರೀತ, ಕೃಷ್ಣ ಕಾಶಿ, ಶ್ರೀನಿಧಿ ದಿಗ್ಗಾವಿ, ಅಡಿವ್ಯಾಚಾರ ಮುಂಗಲಿ, ರವಿ ಆಚಾರ, ರವೀಂದ್ರ ದೇಸಾಯಿ, ಭೀಮಣ್ಣ ಹಂಜಕ್ಕಿ ಸೇರಿದಂತೆ ಬ್ರಾಹ್ಮಣ ಸಮುದಾಯದ ಪ್ರಮುಖರು ಹಾಗೂ ಯುವಕರು ಪಾಲ್ಗೊಂಡಿದ್ದರು.

ಅದೇ ರೀತಿ ತಾಲ್ಲೂಕಿನ ಹಿರೇಬನ್ನಿಗೋಳ, ಶಿರಗುಂಪಿ ಗ್ರಾಮದಲ್ಲಿಯೂ ಮಧ್ವ ನವಮಿ ಉತ್ಸವ ಸಂಭ್ರಮದಿಂದ ನೆರವೇರಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.