ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟ ಹತ್ತಿ ಆಂಜನೇಯನ ದರ್ಶನ ಪಡೆದು ಕೆಳಗಿಳಿಯುತ್ತಿರುವಾಗ ಭಕ್ತರೊಬ್ಬರಿಗೆ ಹೃದಯಘಾತ ಸಂಭವಿಸಿ ಮೃತಪಟ್ಟಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿಯ ಕೊಟ್ರೇಶ (40) ಮೃತರು.
ಕೊಟ್ರೇಶ ಅವರು ಕಲಘಟಗಿಯಿಂದ ಕುಟುಂಬ ಸಮೇತ ಅಂಜನಾದ್ರಿಯ ಆಂಜನೇಯನ ದರ್ಶನಕ್ಕೆ ಬಂದಿದ್ದರು. ಬೆಟ್ಟ ಇಳಿಯುತ್ತಿರುವಾಗ ಹೃದಯಾಘಾತ ಸಂಭವಿಸಿದೆ. ಚಿಕಿತ್ಸೆಗಾಗಿ ಆನೆಗೊಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.