ADVERTISEMENT

‘ಪರೀಕ್ಷಾರ್ಥಿಗಳಿಗೆ ಆತ್ಮಸ್ಥೈರ್ಯ ಇರಲಿ’

ಕರಡಿ ಫೌಂಡೇಶನ್‌ನಿಂದ ಮಾಸ್ಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:00 IST
Last Updated 20 ಜುಲೈ 2021, 4:00 IST
ಕೊಪ್ಪಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಡಿ ಫೌಂಡೇಶನ್‌ ವತಿಯಿಂದ ಮಾಸ್ಕ್‌ಗಳನ್ನು ವಿತರಿಸಲಾಯಿತು
ಕೊಪ್ಪಳದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಡಿ ಫೌಂಡೇಶನ್‌ ವತಿಯಿಂದ ಮಾಸ್ಕ್‌ಗಳನ್ನು ವಿತರಿಸಲಾಯಿತು   

ಕೊಪ್ಪಳ: ‘ವಿದ್ಯಾರ್ಥಿಗಳ ಭವಿಷ್ಯದ ಮಹತ್ವದ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು’ ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ಸಲಹೆ ನೀಡಿದರು.

ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಡಿ ಫೌಂಡೇಶನ್ ವತಿಯಿಂದ ಮಾಸ್ಕ್‌ಗಳನ್ನು ವಿತರಿಸಿ ಮಾತನಾಡಿದರು.

ತಾಲ್ಲೂಕಿನ ಎಲ್ಲ 28 ಪರೀಕ್ಷಾ ಕೇಂದ್ರಗಳಲ್ಲಿನ 7,365 ವಿದ್ಯಾರ್ಥಿಗಳಿಗೆ ಕರಡಿ ಫೌಂಡೇಶನ್‌ನಿಂದ ಮಾಸ್ಕ್‌ಗಳನ್ನು ವಿತರಿಸಲಾಗಿದೆ ಎಂದರು.

ADVERTISEMENT

‘ನಮ್ಮ ಪ್ರತಿಷ್ಠಾನ ಸಮಾಜ ಸೇವೆಯಲ್ಲಿ ಮುಂದೆ ಇದ್ದು, ಕೊರೊನಾ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯ ಹಸ್ತ ನೀಡಿ, ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿದೆ. ವಿದ್ಯಾರ್ಥಿಗಳಿಗೆ ಟ್ಯಾಬ್, ಮೊಬೈಲ್‌ಗಳನ್ನು ನೀಡಿ, ಅವರ ಶಿಕ್ಷಣಕ್ಕೆ ಬೇಕಾದ ಅನುಕೂಲತೆ ಮಾಡಿರುವ ನಮಗೆ ಹೆಮ್ಮೆ ಇದೆ’ ಎಂದು ಹೇಳಿದರು.

ಬಿಇಒ ಉಮೇಶ ಪೂಜಾರ ಅವರು ಮಾತನಾಡಿ,‘ಕರಡಿ ಫೌಂಡೇಶನ್ ಕಾರ್ಯ ಶ್ಲಾಘನೀಯ’ ಎಂದು ಅವರು ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನೀಲ್ ಕುಮಾರ ಹೆಸರೂರ, ಯುವ ಮುಖಂಡರಾದ ರವಿಚಂದ್ರನ್ ಮಾಲಿಪಾಟೀಲ, ವಾಣಿಶ್ರೀ ಮಠದ, ಗವಿ ಜಂತಕಲ್, ಮಂಜುಳಾ ಕರಡಿ ಸೇರಿದಂತೆ ಇನ್ನಿತರರು ವೇಳೆ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.