ADVERTISEMENT

ಅಂಗವಿಕಲರಿಗೆ ಹೊಲಿಗೆಯಂತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 14:03 IST
Last Updated 23 ಏಪ್ರಿಲ್ 2021, 14:03 IST
ತಾವರಗೇರಾ ಸಮೀಪದ ಸಂಗನಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರಿಗೆ ಹೊಲಿಗೆಯಂತ್ರ ವಿತರಿಸಲಾಯಿತು
ತಾವರಗೇರಾ ಸಮೀಪದ ಸಂಗನಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರಿಗೆ ಹೊಲಿಗೆಯಂತ್ರ ವಿತರಿಸಲಾಯಿತು   

ಸಂಗನಾಳ (ತಾವರಗೇರಾ): ‘ಸರ್ಕಾರಿ ಸೌಲಭ್ಯದ ಲಾಭ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಪಿಡಿಒ ಚಂದ್ರಶೇಖರ ಕಂದಕೂರು ಸಲಹೆ ನೀಡಿದರು.

ಸಮೀಪದ ಸಂಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರಿಗೆ ಹೊಲಿಗೆಯಂತ್ರ ವಿತರಿಸಿ ಅವರು ಮಾತನಾಡಿದರು.

‘ಅಂಗವಿಕಲರು ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನಮ್ಮ ಹೊಗರನಾಳ, ಉಪಾಧ್ಯಕ್ಷ ಶರಣಪ್ಪ ಹಂಚಿನಾಳ, ಗ್ರಾ.ಪಂ ಕಾರ್ಯದರ್ಶಿ ಯಮನೂರಪ್ಪ ಪೂಜಾರ, ಕರವಸೂಲಿಗಾರ ಮೌಲಾಸಾಬ, ಬಸವರಾಜ ಕುಂಬಾರ, ಆನಂದ ಹಾಗೂ ಗ್ರಾ.ಪಂ ಸದಸ್ಯರಾದ ಮಹೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.