ಯಲಬುರ್ಗಾ: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬೆಂಗಳೂರಿನ ಯುನೈಟೆಡ್ ವೇ ಮಿಡಿಯಾ ಟೆಕ್ ಸಂಸ್ಥೆ ಸುಮಾರು 30 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಿತು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಶ್ರೀಶೈಲ ತಳವಾರ, ಅಧಿಕಾರಿಗಳ ಕಾರ್ಯಕ್ಷಮತೆ, ಜನಪ್ರತಿನಿಧಿಗಳ ಪ್ರೋತ್ಸಾಹ ಹಾಗೂ ಜನರ ಬೆಂಬಲದಿಂದಾಗಿ ಸಾರ್ವಜನಿಕ ಸೇವೆಯಲ್ಲಿರುವ ಸಂಸ್ಥೆಯು ನಿರೀಕ್ಷೆಗೂ ಮೀರಿ ಉತ್ತಮ ಮಾಡುವಲ್ಲಿ ನಿರತವಾಗುತ್ತದೆ ಎಂದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರ ಬಸವರಾಜ ಮಾತನಾಡಿ, ಇಲ್ಲಿಯ ವೈದ್ಯಕೀಯ ಸೇವೆ ಗುಣಮಟ್ಟದ್ದಾಗಿದೆ ಎಂದರು.
ಪ.ಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯ ಬಸವಲಿಂಗಪ್ಪ ಕೊತ್ತಲ, ವೈದ್ಯಾಧಿಕಾರಿ ಡಾ. ಪ್ರಕಾಶ, ಡಾ. ಸಂಗನಬಸಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪ್ರಭುರಾಜ ಕಲಬುರಗಿ, ದುರಗಪ್ಪ ನಡುಲಮನಿ, ಮುಖಂಡರಾದ ಶಿವಕುಮಾರ ನಾಗಲಾಪೂರುಮಠ, ಕಳಕಪ್ಪ ಕಂಬಳಿ, ಮಾರುತಿ ಗಾವರಾಳ, ಸುರೇಶಗೌಡ ಶಿವನಗೌಡ, ಈರಪ್ಪ ಬಣಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.