ಬೂದಗುಂಪಾ (ಕಾರಟಗಿ): ‘ಉಳೇನೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಶಾಸಕ ಬಸವರಾಜ ದಢೇಸೂಗೂರು ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕಿನ ಬೂದಗುಂಪಾ-ಶೇಷಗಿರಿ ಕ್ಯಾಂಪ್ ಮಧ್ಯೆ ಇರುವ ಉಳೇನೂರ ಏತನೀರಾವರಿ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಅಧಿಕಾರಿಗಳಿಂದ ವಿವರ ಪಡೆದ ಬಳಿಕ ಅವರು ಮಾತನಾಡಿದರು. ರೈತ ವರ್ಗಕ್ಕೆ ಸಮರ್ಪಕ ನೀರಾವರಿ ಸೌಲಭ್ಯ ದೊರೆಯಲಿ ಎಂಬ ಸದಾಶಯದಿಂದ ಯೋಜನೆ ಕಾರ್ಯಗತಗೊಂಡಿದ್ದು, ಅಧಿಕಾರಿಗಳು ಮುತುವರ್ಜಿ ವಹಿಸಿ ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದರು. ಎಂಜಿನಿಯರ್‌ಗಳಾದ ಹರೀಶ್, ಸೂಗಪ್ಪ, ನಾಗಪ್ಪ ಪ್ರಮುಖರಾದ ವೀರೇಶ ಸಾಲೊಣಿ, ವಿಶ್ವನಾಥ ಮೈಲಾಪುರ, ರುದ್ರಗೌಡ ನಂದಿಹಳ್ಳಿ, ಅಮರಗುಂಡಪ್ಪ ಕನಕಗಿರಿ, ಬಸವರಾಜ ಬಿಲ್ಗಾರ, ಬಸವರಾಜಪ್ಪ, ತಿಮ್ಮಣ್ಣ, ಪರಮೇಶಪ್ಪ, ಶರಣಪ್ಪ, ಮುದುಕನಗೌಡ, ಭಾರತೇಶ, ರಂಗಪ್ಪ ಹಾಗೂ ಅಂಬಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.