ADVERTISEMENT

ಮುಸ್ಲಿಂ ಮೀಸಲಾತಿ ವಿಚಾರ; ನಾಳೆ ಕೊಪ್ಪಳದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:13 IST
Last Updated 9 ಸೆಪ್ಟೆಂಬರ್ 2024, 15:13 IST
ಮೊಹಮ್ಮದ್‌ ಜಿಲಾನ್‌ ಕಿಲ್ಲೇದಾರ
ಮೊಹಮ್ಮದ್‌ ಜಿಲಾನ್‌ ಕಿಲ್ಲೇದಾರ   

ಕೊಪ್ಪಳ: ‘ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಮರುಸ್ಥಾಪಿಸಿ ಮೀಸಲಾತಿಯನ್ನು ಶೇ.4ರಿಂದ ಶೇ8ಕ್ಕೆ ಹೆಚ್ಚಳ ಮಾಡಬೇಕು’ ಎಂದು ಇಲ್ಲಿನ ಕರ್ನಾಟಕ ಮುಸ್ಲಿಂ ಯೂನಿಟಿ ಸಂಘಟನೆ ಸರ್ಕಾರವನ್ನು ಆಗ್ರಹಿಸಿದೆ.

ಸಂಘಟನೆಯ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಜಿಲಾನ್‌ ಕಿಲ್ಲೇದಾರ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ವಿಜಯಪುರದಿಂದ ಬೆಂಗಳೂರು ತನಕ ಕಾರ್‌ ರ್‍ಯಾಲಿ ಹಮ್ಮಿಕೊಂಡಿದ್ದೇವೆ. ಈ ಕುರಿತು ಚರ್ಚಿಸಲು ಸೆ. 11ರಂದು ಬೆಳಿಗ್ಗೆ 11.30ಕ್ಕೆ ಇಲ್ಲಿನ ಹಜರತ್‌ ಮರ್ದಾನೆ ಗೈಬ್‌ ದರ್ಗಾ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ’ ಎಂದು ತಿಳಿಸಿದರು.

‘ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ವಿರುದ್ಧವಲ್ಲ. ಎಲ್ಲ ಮುಸ್ಲಿಮರು ಸೇರಿ ಹೋರಾಡುತ್ತಿದ್ದೇವೆ. ಶಿಕ್ಷಣ ಮತ್ತು  ಉದ್ಯೋಗದ ಅವಕಾಶಗಳಲ್ಲಿ ಹಿಂದುಳಿರುವ ಮುಸ್ಲಿಂ ಸಮುದಾಯವನ್ನು ಅಭಿವೃದ್ಧಿ ಪಥಕ್ಕೆ ತರಲು ಮೀಸಲಾತಿ ಅಗತ್ಯ’ ಎಂದರು.

ADVERTISEMENT

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಕುದರಿಮೋತಿ, ಜಿಲ್ಲಾ ಉಪಾಧ್ಯಕ್ಷ ಸಿರಾಜ್‌ ಮನಿಯಾರ್‌, ತಾಲ್ಲೂಕು ಅಧ್ಯಕ್ಷ ಫಕುರುಸಾಬ್‌ ನದಾಫ್‌ ಹಾಗೂ ತಾಲ್ಲೂಕು ಉಪಾಧ್ಯಕ್ಷ ಉಬ್ರಾಹಿಂ ಎಂ. ಪಟೇಲ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.