ADVERTISEMENT

ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ: ಸಿಇಒ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 11:17 IST
Last Updated 26 ಫೆಬ್ರುವರಿ 2022, 11:17 IST
ಫೌಜಿಯಾ ತರನುಮ್
ಫೌಜಿಯಾ ತರನುಮ್   

ಕೊಪ್ಪಳ: ಭಾರತ ಚುನಾವಣಾ ಆಯೋಗವು ಮಾ.15 ರವರೆಗೆ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಸ್ಪರ್ಧೆಗಳಲ್ಲಿ ಎಲ್ಲ ವಯೋಮಾನದವರು ಭಾಗವಹಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಞೆ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

'ನನ್ನ ಮತ ನನ್ನ ಭವಿಷ್ಯ', ಒಂದು ಮತ ಶಕ್ತಿ' ಎಂಬ ಧ್ಯೇಯ ವಾಕ್ಯದೊಡನೆ ಮತದಾರರಿಗೆ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗವು ಗಾಯನ, ರಸಪ್ರಶ್ನೆ, ಭಿತ್ತಿಪತ್ರ ವಿನ್ಯಾಸ, ವೀಡಿಯೋ ತಯಾರಿಕೆ, ಘೋಷವಾಕ್ಯ ಬರಹ ಎಂಬ 5 ಸ್ಪರ್ಧೆಗಳನ್ನು ಆನ್‌ಲೈನ್ ಮೂಲಕ ಏರ್ಪಡಿಸಲಾಗಿದೆ ಎಂದರು.

ಪ್ರತಿ ಸ್ಪರ್ಧೆಯಲ್ಲಿ ಸಾಂಸ್ಥಿಕ, ವೃತ್ತಿಪರ ಮತ್ತು ಹವ್ಯಾಸಿ ಎಂಬ 3 ವರ್ಗಗಳಿದ್ದು ಎಲ್ಲರೂ ಭಾಗವಹಿಸಬಹುದು, ವೀಡಿಯೋ ತಯಾರಿಕಾ ಸ್ಪರ್ಧೆಯ ಸಾಂಸ್ಥಿಕ ವರ್ಗದಲ್ಲಿ ಮೊದಲನೇ ಬಹುಮಾನ 2ಲಕ್ಷ, 2ನೇ ಬಹುಮಾನ 1ಲಕ್ಷ ಮತ್ತು ಮೂರನೇ ಬಹುಮಾನ 75ಸಾವಿರ ಹಾಗೂ 4 ಜನರಿಗೆ 30ಸಾವಿರಗಳ ಸಮಾಧಾನಕರ ಬಹುಮಾನ ಇರುತ್ತದೆ.

ADVERTISEMENT

ಅದೇ ರೀತಿ ಎಲ್ಲವಿಜೇತರಿಗೆ ಆಕರ್ಷಕ ಬಹುಮಾನ, ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಹ ಸಿಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಷರತ್ತುಗಳಿಗೆ ಸ್ಪರ್ಧೆಯ ವೆಬ್‌ಸೈಟ್‌ಗಳಾದ https://ecisveep.nic.in/contest ಮತ್ತು https://voterawarenesscontest.in ನ್ನು ವೀಕ್ಷಿಸಬಹುದು.

ಅಂತಯೇ ಭಾಗವಹಿಸುವವರು ಮಾ.15 ರೊಳಗೆ voter-contest@eci.gov.in ಗೆ ಇ-ಮೇಲ್ ಮಾಡಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.