ADVERTISEMENT

‘ಸಮಾನತೆ, ಸೌಹಾರ್ದ ಬೆಳೆಸಿ’-ಡಿ.ಟಿ.ತ್ಯಾಗರಾಜ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 6:04 IST
Last Updated 14 ಜನವರಿ 2022, 6:04 IST
ಬೆಂಗಳೂರಿನ ಇಶಾ ಸಂಸ್ಥೆಯ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್‌ಐವಿ ಏಡ್ಸ್ ವಾರ್ಷಿಕ ಸಭೆಯಲ್ಲಿ ಕೊಪ್ಪಳದ ನವಜ್ಯೋತಿ ನೆಟ್‌ವರ್ಕ್‌ ಸಂಸ್ಥೆ ಸದಸ್ಯರು ಡಿ. ಟಿ. ತ್ಯಾಗರಾಜ ಅವರನ್ನು ಸನ್ಮಾನಿಸಿದರು
ಬೆಂಗಳೂರಿನ ಇಶಾ ಸಂಸ್ಥೆಯ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್‌ಐವಿ ಏಡ್ಸ್ ವಾರ್ಷಿಕ ಸಭೆಯಲ್ಲಿ ಕೊಪ್ಪಳದ ನವಜ್ಯೋತಿ ನೆಟ್‌ವರ್ಕ್‌ ಸಂಸ್ಥೆ ಸದಸ್ಯರು ಡಿ. ಟಿ. ತ್ಯಾಗರಾಜ ಅವರನ್ನು ಸನ್ಮಾನಿಸಿದರು   

ಕೊಪ್ಪಳ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಲ್ಲಿ ಸಮಾನತೆ, ಸೌಹಾರ್ದ ಬೆಳೆಸಬೇಕಿದೆ ಎಂದು ಕರ್ನಾಟಕ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್‌ಐವಿ ಏಡ್ಸ್ ಅಸೋಷಿಯನ್ ಪ್ರಧಾನ ಕಾರ್ಯದರ್ಶಿ ಡಿ.ಟಿ. ತ್ಯಾಗರಾಜಹೇಳಿದರು.

ಅವರು ಇಶಾ ಸಂಸ್ಥೆಯಲ್ಲಿ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್‌ಐವಿ ಏಡ್ಸ್ ಇದರ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇದೇ ವೇಳೆ 9 ಅಸೋಷಿಯನ್ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.

ADVERTISEMENT

ಹಿರಿಯ ವಕೀಲ ಎಂ.ಬಿ.ನದಾಫ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿ ರ್ವಹಿಸಿದರು. ರಾಜ್ಯ ಅಧ್ಯಕ್ಷರಾಗಿ ಭಾಗ್ಯಮ್ಮ, ಉಪಾಧ್ಯಕ್ಷರಾಗಿ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಟಿ.ತ್ಯಾಗರಾಜ, ಖಚಾಂಚಿಯಾಗಿ ದೇವರಾಜ, ನಿರ್ದೇಶಕರಾಗಿ ಆಶಾ, ಈರಮ್ಮ, ಮಂಜಪ್ಪ ಕೋಡೇರ ಮತ್ತು ರವಿಕೃಷ್ಣರೆಡ್ಡಿ ಆಯ್ಕೆಗೊಂಡರು.

ನಂತಯೋಜನಾ ವ್ಯವಸ್ಥಾಪಕ ಮೈಕೆಲ್ ಬಾಬುರಾಜ ಮಾತನಾಡಿ, ರಾಜ್ಯದ ಪ್ರತಿ ಮೂಲೆ ಮೂಲೆಗಳಲ್ಲಿ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಅದರ ಸೌಲಭ್ಯಗಳನ್ನು ಮನವರಿಕೆಯೊಂದಿಗೆ ಮನೆ, ಮನೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಚುನಾವಣಾಧಿಕಾರಿ ವಕೀಲರಾದ ಎಂ.ಬಿ.ನದಾಫ, ಮೈಕೆಲ್ ಬಾಬುರಾಜ ಮತ್ತು ಡಿ. ಟಿ. ತ್ಯಾಗರಾಜ ಇವರಿಗೆ ಕೊಪ್ಪಳ ನವಜ್ಯೋತಿ ನೆಟವರ್ಕ್‍ನ ಅಧ್ಯಕ್ಷೆ ನಾಗರತ್ನ ಅಳವಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.