ADVERTISEMENT

‘ಕೂಲಿ ಮುಂಗಡ ಪಾವತಿಸಿ’

​ಪ್ರಜಾವಾಣಿ ವಾರ್ತೆ
Published 9 ಮೇ 2021, 6:04 IST
Last Updated 9 ಮೇ 2021, 6:04 IST
ರೆಡ್ಡಿ ಶ್ರೀನಿವಾಸ
ರೆಡ್ಡಿ ಶ್ರೀನಿವಾಸ   

ಗಂಗಾವತಿ: ‘ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಜಾಬ್‌ಕಾರ್ಡ್‌ ಹೊಂದಿದ ಕಾರ್ಮಿಕರಿಗೆ ಮುಂಗಡವಾಗಿ ಎರಡು ವಾರದ ಕೂಲಿ ಪಾವತಿಸಬೇಕು’ ಎಂದು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜನರು ಸರ್ಕಾರದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಜ್ಜಾಗಿದ್ದಾರೆ. ಆದರೆ ಜಿಲ್ಲೆಯ ಗ್ರಾಮೀಣ ಜನತೆ ನಿತ್ಯ ಕೃಷಿ ಕಾರ್ಯ ಮತ್ತು ಖಾತರಿ ಯೋಜನೆಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಕನಕಗಿರಿ, ಗಂಗಾವತಿ ಮತ್ತು ಕಾರಟಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳು ಉದ್ಯೋಗ ಸೃಷ್ಟಿಸಿವೆ’ ಎಂದರು.

‘ಲಾಕ್‍ಡೌನ್‍ನಿಂ
ದ ಅವರ ಕೆಲಸ ಸ್ಥಗಿತಗೊಳ್ಳುತ್ತದೆ. ಈ ಸಂದರ್ಭದಲ್ಲಿ ನಿತ್ಯ ದುಡಿದು ಬದುಕುವ ಬಡ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಅವರಿಗೆ ಎರಡು ತಿಂಗಳ ಕೂಲಿ ನೀಡಿದರೆ ಅನುಕೂಲವಾಗಲಿದೆ. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಕುರಿತು ಗಂಭೀರ ಚಿಂತನೆ ನಡೆಸಿ ಗ್ರಾಪಂಗಳಿಗೆ ಕೂಲಿ ಹಣ ಮುಂಗಡ ಪಾವತಿಸಲು ಆದೇಶ ಮಾಡಬೇಕು’ ಎಂದು ಅಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.