ADVERTISEMENT

ನವಿಲು ಪಾರ್ಕ್ ನಿರ್ಮಾಣಕ್ಕೆ ಪರಿಸರ ಪ್ರಿಯರ ಮನವಿ

ಕಿಶನರಾವ್‌ ಕುಲಕರ್ಣಿ
Published 19 ಏಪ್ರಿಲ್ 2021, 4:20 IST
Last Updated 19 ಏಪ್ರಿಲ್ 2021, 4:20 IST
ಹನಮಸಾಗರ ಸಮೀಪದ ಚಂದಾಲಿಂಗೇಶ್ವರ ಬೆಟ್ಟದಲ್ಲಿ ಕಂಡು ಬರುವ ನವಿಲುಗಳು
ಹನಮಸಾಗರ ಸಮೀಪದ ಚಂದಾಲಿಂಗೇಶ್ವರ ಬೆಟ್ಟದಲ್ಲಿ ಕಂಡು ಬರುವ ನವಿಲುಗಳು   

ಹನುಮಸಾಗರ: ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ನವಿಲಿನ ಸಂಖ್ಯೆ ಹೆಚ್ಚುತ್ತಿದ್ದು, ನವಿಲಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ನಾಯಿಗಳ ಪಾಲಾಗುತ್ತಿದ್ದು, ಸರ್ಕಾರ ಈ ಭಾಗದಲ್ಲಿ ನವಿಲು ಧಾಮ ನಿರ್ಮಾಣ ಮಾಡಿ ಅವುಗಳ ಸಂತತಿ ಉಳಿಸಬೇಕು ಎಂದುಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯ ಕಾಲಕಾಲೇಶ್ವರ ಬಿಟ್ಟದಿಂದ ಹಿಡಿದು ಬಾಗಲಕೋಟೆ ಜಿಲ್ಲೆ ಗುಡೂರ ಮಧ್ಯದಲ್ಲಿ ಬರುವ ಚಂದಾಲಿಂಗಬೆಟ್ಟ, ವೆಂಕಟಾಪುರ ಬೆಟ್ಟ, ಬಾದಿಮನಾಳ, ಅರಸಿಬಿಡಿ ಕೆರೆ ಭಾಗದಲ್ಲಿ ಸುಮಾರು 40 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು2ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನವಿಲುಗಳು ಇವೆ.

ರಾಷ್ಟ್ರಪಕ್ಷಿ ನವಿಲು ಬೇಟೆ, ಹತ್ಯೆ, ಆಹಾರಕ್ಕೆ ಬಳಕೆ, ಸಾಕಲು ನಿಷೇಧವಿದೆ. ಕೆಲವು ನವಿಲುಗಳು ಗ್ರಾಮದ ಜನರೊಂದಿಗೆಅನ್ಯೋನ್ಯವಾಗಿದ್ದರೂನಾಯಿ, ಬೆಕ್ಕುಗಳ ಕಾಟಕ್ಕೆ ಹೆದರಿ ಓಡಿ ಹೋಗುತ್ತವೆ. ಬೆಟ್ಟದ ಭಾಗದಲ್ಲಿ ರಕ್ಷಣೆಗೆ ಅನುಕೂಲವಿದೆ ವಿನಃ ಆಹಾರ ಹಾಗೂ ಕುಡಯುವ ನೀರಿಗೆ ತೀವ್ರ ತೊಂದರೆ ಇದೆ.

ADVERTISEMENT

ಅರಣ್ಯ ಇಲಾಖೆ ಈ ಭಾಗದಲ್ಲಿ ನವಿಲುಗಳ ಉಳಿಯುವಿಕೆಗಾಗಿಧಾಮ ಮಾಡುವುದರ ಮೂಲಕ ನವಿಲು ಸಂತತಿ ಉಳಿಯುವಿಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ರುದ್ರಗೌಡ ಗೌಡಪ್ಪನವರ ಹಾಗೂ ರಮೇಶ ಬಡಿಗೇರ ಒತ್ತಾಯಿಸಿದ್ದಾರೆ.

ನವಿಲು ಧಾಮ ನಿರ್ಮಾಣ ಮಾಡಿ ಕುಡಿಯುವ ನೀರು, ಅವುಗಳ ಆಹಾರ, ಕಾಡು ಬೆಳೆಸುವ ಮೂಲಕ ಸುಂದರ ಪಕ್ಷಿಯ ರಕ್ಷಣೆ ಮಾಡಬೇಕು ಎಂಬುವುದು ಈ ಭಾಗದ ವನ್ಯಜೀವಿ ಪ್ರೇಮಿಗಳ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.