ADVERTISEMENT

ಅಂಚೆ ಇಲಾಖೆಯಿಂದ 26ರಂದು ಪಿಂಚಣಿ ಅದಾಲತ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:54 IST
Last Updated 9 ಜೂನ್ 2025, 14:54 IST
ಭಾರತೀಯ ಅಂಚೆ ಇಲಾಖೆ
ಭಾರತೀಯ ಅಂಚೆ ಇಲಾಖೆ   

ಕೊಪ್ಪಳ: ಇಲ್ಲಿನ ವಿಭಾಗೀಯ ಅಂಚೆ ಕಚೇರಿ ವತಿಯಿಂದ ಅಂಚೆ ಇಲಾಖೆ ಮೂಲಕ ಪಿಂಚಣಿ ಪಡೆಯುವ ಪಿಂಚಣಿದಾರರ ಅಹವಾಲು, ದೂರು ಸ್ವೀಕಾರಕ್ಕಾಗಿ ಜೂ. 26ರಂದು ವಿಭಾಗೀಯ ಅಂಚೆ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅವಲಂಬಿತರು ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಲು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ ಅಂಚೆ ಅಧೀಕ್ಷಕರ ಕಚೇರಿ, ಕೊಪ್ಪಳ ವಿಭಾಗ, ಕೊಪ್ಪಳ-583231 ವಿಳಾಸಕ್ಕೆ ಅಥವಾ dokoppal.ka@indiapost.gov.inಗೆ ಜೂ. 21ರೊಳಗೆ ಸಲ್ಲಿಸಬೇಕು ಎಂದು ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT