ADVERTISEMENT

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌

ತರಬೇತಿ ಶಿಬಿರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 4:09 IST
Last Updated 16 ನವೆಂಬರ್ 2021, 4:09 IST
ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಗೃಹರಕ್ಷಕದಳದ ನೂತನ ಸದಸ್ಯರ ಹತ್ತು ದಿನದ ತರಬೇತಿ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟ ಜಿ.ಗವಿಸಿದ್ದಪ್ಪ, ಕಮಾಂಡರ್ ರವೀಂದ್ರ ಬಾಕಳೆ ಇದ್ದರು
ಗಂಗಾವತಿ ತಾಲ್ಲೂಕಿನ ಹೇಮಗುಡ್ಡ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಗೃಹರಕ್ಷಕದಳದ ನೂತನ ಸದಸ್ಯರ ಹತ್ತು ದಿನದ ತರಬೇತಿ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟ ಜಿ.ಗವಿಸಿದ್ದಪ್ಪ, ಕಮಾಂಡರ್ ರವೀಂದ್ರ ಬಾಕಳೆ ಇದ್ದರು   

ಗಂಗಾವತಿ: ‘ಗೃಹರಕ್ಷಕರು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್‌ ಸಲಹೆ ನೀಡಿದರು.

ತಾಲ್ಲೂಕಿನ ಹೇಮಗುಡ್ಡ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಗೃಹರಕ್ಷಕದಳದ ನೂತನ ಸದಸ್ಯರ ಹತ್ತು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗೃಹರಕ್ಷಕರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಇಂಥ ತರಬೇತಿಗಳು ಅಗತ್ಯ. ಸಮರ್ಥ ಗೃಹ ರಕ್ಷಕರಾಗಿ, ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ,‘ಪೋಲಿಸ್ ಇಲಾಖೆ ಜತೆಗೆ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕ ಸಿಬ್ಬಂದಿ ಕಾರ್ಯ ಶ್ಲಾಘನೀಯ. ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ಗೃಹ ರಕ್ಷಕರಿಗೆ ನಿರಂತರವಾಗಿ ಭತ್ಯೆ ಒದಗಿಸುತ್ತವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರವೂ ಅದನ್ನು ನೀಡಲಿದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟ ಜಿ.ಗವಿಸಿದ್ದಪ್ಪ, ಕಮಾಂಡರ್ ರವೀಂದ್ರ ಬಾಕಳೆ ಮಾತನಾಡಿದರು. ಕ್ಯಾಂಪ್ ಕಮಾಂಡರ್ ವೀರಣ್ಣ ಬಡಿಗೇರ, ಐಎಎಸ್ ಅಧಿಕಾರಿ ಹೇಮಂತ್, ಘಟಕಾಧಿಕಾರಿಗಳಾದ ಮಿರ್ ಸಾಬ್, ನಾಗರಾಜ ಬಡಿಗೇರ, ಶಿವಪ್ಪ ಚೂರಿ, ರುದ್ರಪ್ಪ, ಹಸನ್ ಸಾಬ್ ಚಳಿಗೇರಾ, ಬಾಬುಸಾಬ್, ಅಮರೇಶ್, ಗೋಪಾಲ ಶಾಸ್ತ್ರಿ, ರವೀಂದ್ರ, ರಾಮಚಂದ್ರ, ಅಶೋಕ್ ಬಡಿಗೇರ, ಮೈಬೂಬ್ ಸಾಬ್ ಸೇರಿ ಕೊಪ್ಪಳ, ಕಾರಟಗಿ, ಮುನಿರಾಬಾದ್, ಹನುಮಸಾಗರ, ತಾವರಗೇರಾ, ಕನಕಗಿರಿ, ಬೇವೂರು, ಕುಕನೂರು, ಕುಷ್ಟಗಿ, ಯಲಬುರ್ಗಾದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.