ADVERTISEMENT

ಪೊಲೀಸರ ಮೇಲೆ ಯುವಕರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:27 IST
Last Updated 9 ಅಕ್ಟೋಬರ್ 2024, 15:27 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ದಾಸನಾಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಬುಧವಾರ ಬೈಕ್ ವೀಲಿಂಗ್‌ ಮಾಡುತ್ತಿರುವ ಯುವಕರನ್ನು ತಡೆಯಲು ಮುಂದಾದ ಪೊಲೀಸರ ಮೇಲೆಯೇ ಯುವಕರು ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿದ ಯುವಕರಾದ ಗಂಗಾವತಿ ನಗರದ ಅರ್ಬಜ್ ಖಾನ್, ಪಂಪನಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾಸನಾಳದ ಮುಖ್ಯ ರಸ್ತೆಯಲ್ಲಿ ಯುವಕನೊಬ್ಬ ಬೈಕ್ ವೀಲಿಂಗ್‌ ನಡೆಸುತ್ತಿರುವಾಗ, ಕೊಪ್ಪಳದಿಂದ ಗಂಗಾವತಿಗೆ ಬರುತ್ತಿದ್ದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ವಾಹನ ನಿಲ್ಲಿಸಿ, ಬೈಕ್ ವೀಲಿಂಗ್‌ ತಡೆಯಲು ಮುಂದಾಗಿದ್ದರು.

ADVERTISEMENT

ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಬೈಕ್ ವೀಲಿಂಗ್‌ ಯುವಕರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಯುವಕರು ಏಕಾಏಕಿ ಪೊಲೀಸ್ ಕಾನ್‌ಸ್ಟೆಬಲ್‌ ಬಸವರಾಜ ಮತ್ತು ಗ್ರಾಮೀಣ ಠಾಣೆ ಪಿಎಸ್ಐ ಪುಂಡಲಿಕಪ್ಪ, ಮತ್ತೊಬ್ಬ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಮಾಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.