ADVERTISEMENT

ಯಲಬುರ್ಗಾ: ‘ಅಸ್ಪೃಶ್ಯತೆ ನಿವಾರಣೆಗೆ ಸಹಕಾರ ಅಗತ್ಯ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 3:09 IST
Last Updated 9 ಜನವರಿ 2022, 3:09 IST
ಯಲಬುರ್ಗಾ ತಾಲ್ಲೂಕು ಮುರಡಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತಾ ನಿವಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು
ಯಲಬುರ್ಗಾ ತಾಲ್ಲೂಕು ಮುರಡಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತಾ ನಿವಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು   

ಯಲಬುರ್ಗಾ: ಸಾಮಾಜಿಕ ಪಿಡುಗು ಆಗಿರುವ ಅಸ್ಪೃಶ್ಯತೆ ನಿವಾರಣೆಗೆ ಎಲ್ಲರೂ ಸಹಕರಿಸಬೇಕಾಗಿದೆ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.

ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೆಲವೊಂದು ಕಡೆಗಳಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯು ಅತ್ಯಂತ ಅಮಾನವೀಯವಾಗಿದೆ. ಸಂವಿಧಾನವು ಎಲ್ಲರೂ ಸಮಾನರು ಎಂದು ಹೇಳಿದೆ. ಅಸ್ಪೃಶ್ಯತೆ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ.ಆದರೂ ಕೆಲವು ಈ ಚಟುವಟಿಕೆಗೆ ಮುಂದಾಗು ತ್ತಿರುವುದು ಕೆಟ್ಟ ನಡೆ ಎಂದರು.

ಸಮಾಜಕ್ಕೆ ಮಾರಕವಾಗುವ ಹಾಗೂ ಸಂವಿಧಾನದಲ್ಲಿ ಅವಕಾಶವಿಲ್ಲದ ಯಾವುದೇ ಸಂಪ್ರದಾಯಗಳನ್ನು ಸಾರ್ವತ್ರಿಕವಾಗಿ ಆಚರಿಸುವಂತಿಲ್ಲ. ಆದರೆ ತಿಳುವಳಿಕೆ ಇಲ್ಲದ ಜನರು ಇಂತಹ ಚಟುವಟಿಕೆಗಳಿಗೆ ಮುಂದಾಗುತ್ತಿದ್ದಾರೆ. ಹೋಟಲ್, ಕ್ಷೌರದಂಗಡಿ, ದೇವಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರನ್ನೂ ಸರಿಸಮನಾಗಿ ಕಾಣಬೇಕು ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಅಧ್ಯಕ್ಷತೆ ವಹಿಸಿದ್ದ ಶಾಂತಾ ಶರಣು ಹಾವೇರಿ ಮಾತನಾಡಿದರು.

ಗ್ರಾ.ಪಂ ಸದಸ್ಯರಾದ ಬಸವನಗೌಡ ಮಾಲಿಪಾಟೀಲ, ದೊಡ್ಡಬಸಪ್ಪ ಹಂಚಿನಾಳ, ಹನುಮಂತಪ್ಪ ತಳವಾರ, ಸುನೀತಾ ಪೊಲೀಸ್ ಪಾಟೀಲ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ, ಸಮಾಜಕಲ್ಯಾಣ ಇಲಾಖೆಯ ವಿ.ಕೆ.ಬಡಿಗೇರ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ವಿ.ಭಜಂತ್ರಿ, ಗಣ್ಯರಾದ ಗಿಡ್ಡಪ್ಪ ರಾಠೋಡ, ಕನಕ ಮಾರನಾಳ, ಶಶಿಧರ ನಾಯಕ, ಹನುಮಗೌಡ, ನಾಗರಾಜ ಹಾಲಳ್ಳಿ, ಫಕೀರಗೌಡ, ಗಿರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.