ಕನಕಗಿರಿ: ತಾಲ್ಲೂಕಿನ ಸಮೀಪದ ಮುಸಲಾಪುರ ಗ್ರಾಮದ ಬಾರ್ ಮುಂದೆ ಕುರಿಗಾಯಿ ಯುವಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಮಾಡಿದ್ದಾನೆ ಎಂದು ಆರೋಪಿಸಿ ಇಂಗಳದಾಳ ತಾಂಡಾದ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಈ ತಾಂಡಾದ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಮರಳುವಾಗ ಮಳೆ ಸುರಿಯಿತು. ಆಗ ವಿದ್ಯಾರ್ಥಿನಿಯರು ಆಶ್ರಯಕ್ಕಾಗಿ ಬಾರ್ ವೊಂದರ ಬಳಿ ನಿಂತಾಗ ಕೆಲವರು ಅಸಭ್ಯ ವರ್ತನೆ ತೋರಿದ್ದಾರೆ ಎಂದು ತಾಂಡದ ಜನ ಆರೋಪಿಸಿದ್ದಾರೆ.
ಬಾರ್ ಮುಂದೆ ತೆರಳುತ್ತಿದ್ದಾಗ ವಿದ್ಯಾರ್ಥಿನಿಯರ ಜೊತೆ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ ನಂತರ ಬಾರ್ ನಲ್ಲಿ ಮದ್ಯ ಕುಡಿದು ಮತ್ತೊಮ್ಮೆ ಇಂಗಳದಾಳ ತಾಂಡಾದ ವಿದ್ಯಾರ್ಥಿನಿಯರನ್ನು ಚುಡಾಯಿಸಿ ನಾಪತ್ತೆಯಾಗಿದ್ದಾನೆ ಎಂದು ಅವರು ಅರೋಪಿಸಿದರು.
ನಂತರ ಬಾರ್ ಮುಂದೆ ಪಾಲಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಿಸಿಟಿವಿ ಕ್ಯಾಮೆರಾದ ವಿಡಿಯೊ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.