ಕಾರಟಗಿ: ಮದ್ಯದ ಅಂಗಡಿ ಹೆಚ್ಚಿಸಿ, ಗಾಂಧಿ ಜಯಂತಿ ಆಚರಿಸಲು ಸರ್ಕಾರಕ್ಕೆ ನೈತಿಕ ಹಕ್ಕು ಇಲ್ಲ. ಮದ್ಯದ ಅಂಗಡಿಗಳ ಮಂಜೂರಾತಿಯ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ)ದ ಕನಕಗಿರಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಓತ್ತಾಯಿಸಿದರು.
ಪಟ್ಟಣದಲ್ಲಿ ಸೋಮವಾರ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ, ಸರ್ಕಾರ ಗಾಂಧಿ ಜಯಂತಿ ದಿನದಂದು ಮದ್ಯ ಮಾರಾಟ ಸ್ಥಗಿತಗೊಳಿಸುತ್ತದೆ. ಇನ್ನೊಂದೆಡೆ ಮದ್ಯದ ಹೊಸ ಅಂಗಡಿ ತೆರೆಯಲು ಮುಂದಾಗಿದೆ. ಈ ಇಬ್ಬಗೆಯ ನೀತಿಯನ್ನು ಸರ್ಕಾರ ಕೈಬಿಡಬೇಕು ಎಂದರು.
ಪದಾಧಿಕಾರಿಗಳಾದ ದಾವೂದ್, ಉಮರ್ ಫಾರೂಕ್ ಜಂಗಮರ ಕಲ್ಗುಡಿ, ವಿಮೆನ್ ಇಂಡಿಯಾ ಮೂಮೆಂಟ್‌ನ ಉಮ್ಮೆ ರೂಮನ್, ಶಾಹೀನ್‌ಖಾನ್, ಗಂಗಾವತಿ ಕ್ಷೇತ್ರ ಸಮಿತಿ ಅಧ್ಯಕ್ಷ ಸೈಯದ್ ಫಾತಿಮಾ ಹಾಗೂ ಇತರ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.