ADVERTISEMENT

ಗ್ರಾ.ಪಂ ಸಿಬ್ಬಂದಿ ಆತ್ಮಹತ್ಯೆ: ಶವ ಇಟ್ಟು ಪ್ರತಿಭಟನೆ

ಅಂಟರಠಾಣಾ ಗ್ರಾಮ ಪಂಚಾಯಿತಿ ಎದುರು ಕುಟುಂಬಸ್ಥರು, ಸಿಬ್ಬಂದಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:17 IST
Last Updated 27 ಜನವರಿ 2020, 11:17 IST
ಹನುಮಸಾಗರ ಸಮೀಪದ ಅಂಟರಠಾಣಾ ಗ್ರಾಮ ಪಂಚಾಯಿತಿ ಎದುರು ಭಾನುವಾರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯರಿಗೋನಾಳ ಗ್ರಾಮದ ರಾಜಶೇಖರ ತಮ್ಮಣ್ಣವರ ಶವವಿಟ್ಟು ಮೃತನ ಸಂಬಂಧಿಕರು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು
ಹನುಮಸಾಗರ ಸಮೀಪದ ಅಂಟರಠಾಣಾ ಗ್ರಾಮ ಪಂಚಾಯಿತಿ ಎದುರು ಭಾನುವಾರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯರಿಗೋನಾಳ ಗ್ರಾಮದ ರಾಜಶೇಖರ ತಮ್ಮಣ್ಣವರ ಶವವಿಟ್ಟು ಮೃತನ ಸಂಬಂಧಿಕರು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು   

ಹನುಮಸಾಗರ: ಅಂಟರಠಾಣಾ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಯರಿಗೋನಾಳ ಗ್ರಾಮದ ರಾಜಶೇಖರ ಸಂಗಪ್ಪ ತಮ್ಮಣ್ಣವರ (30) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಮೃತರ ಸಂಬಂಧಿಕರು ಮತ್ತು ವಿವಿಧ ಗ್ರಾಮಪಂಚಾಯಿತಿಗಳ ಸಿಬ್ಬಂದಿಗಳು ಶವವನ್ನು ಪಂಚಾಯಿತಿ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ಪಂಚಾಯಿತಿ ಅಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ಮೈದುನನ ಕಿರುಕುಳದಿಂದ ರಾಜಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಿರುಕುಳ ನೀಡಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪ ಅವರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದರು. ನಂತರ ಅವರು ಪ್ರತಿಭಟನೆ ಕೈಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.