ADVERTISEMENT

ಕೊಪ್ಪಳದಲ್ಲಿಯೂ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 7:40 IST
Last Updated 18 ಆಗಸ್ಟ್ 2024, 7:40 IST

ಕೊಪ್ಪಳ: ಕಳೆದ ತಿಂಗಳು ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಈ ಬಾರಿ ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಖುಷಿ ಮೂಡಿಸಿದೆ.

ಆದರೆ ನಗರ ಪ್ರದೇಶದ ಕಲ್ಯಾಣ ನಗರ, ಶಿವಗಂಗಾ ನಗರಕ್ಕೆ ಹೋಗುವ ಮಾರ್ಗ ಸೇರಿದಂತೆ ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನಗಳ ಸವಾರರು ಪರದಾಡಿದರು. ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ವ್ಯಾಪ್ತಿಯಲ್ಲಿ 3.16 ಸೆಂ.ಮೀ., ಕುಷ್ಟಗಿಯಲ್ಲಿ 10.07 ಸೆಂ.ಮೀ., ಅಳವಂಡಿಯಲ್ಲಿ 5.16 ಸೆಂ.ಮೀ., ಕುಷ್ಟಗಿ ತಾಲ್ಲೂಕಿನ ಹನುಮನಾಳ ವ್ಯಾಪ್ತಿಯಲ್ಲಿ 7.02 ಸೆಂ.ಮೀ., ದೋಟಿಹಾಳದಲ್ಲಿ 6.13 ಸೆಂ.ಮೀ., ಕಿಲ್ಲಾರಹಟ್ಟಿಯಲ್ಲಿ 1.96 ಮತ್ತು ತಾವರಗೇರಾದಲ್ಲಿ 2.82 ಸೆಂ.ಮೀ., ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT