ADVERTISEMENT

ಮಾರುತೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 9:11 IST
Last Updated 17 ಏಪ್ರಿಲ್ 2021, 9:11 IST
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಯುಗಾದಿಯಂದು ಮಾರುತೇಶ್ವರ ಜಾತ್ರೆ ಪ್ರಯುಕ್ತ ಲಘು ರಥೋತ್ಸವ ಸಂಭ್ರಮದಿಂದ ನಡೆಯಿತು
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಯುಗಾದಿಯಂದು ಮಾರುತೇಶ್ವರ ಜಾತ್ರೆ ಪ್ರಯುಕ್ತ ಲಘು ರಥೋತ್ಸವ ಸಂಭ್ರಮದಿಂದ ನಡೆಯಿತು   

ಘಟ್ಟಿರಡ್ಡಿಹಾಳ (ಅಳವಂಡಿ): ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆರಾಧ್ಯ ದೈವ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಜಾತ್ರೆಅಂಗವಾಗಿ ಮೂರ್ತಿಗೆ ಬೆಳಿಗ್ಗೆ ವಿಶೇಷ ಪೂಜೆ, ಭಕ್ತರಿಂದ ಎಲೆ ಪೂಜಾ ಕಾರ್ಯಕ್ರಮ, ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಿಳೆಯರು ಹಾಗೂ ಯುವಕರು, ಹರಕೆ ಹೊತ್ತ ಭಕ್ತರುದೀರ್ಘದಂಡ ನಮಸ್ಕಾರ ಹಾಕಿದರು.

ನಂತರ ಸಂಜೆಹೊಂಡ ಹಾರುವ ಕಾರ್ಯಕ್ರಮ ಹಾಗೂ ಮಾರುತೇಶ್ವರ ಲಘು ರಥೋತ್ಸವ ವಿಜೃಭಣೆಯಿಂದ ಜರುಗಿತು.

ADVERTISEMENT

ಭಕ್ತರು ಉತ್ತುತ್ತಿ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಮಾರುತೇಶ್ವರ ದೇವಸ್ಥಾನದಿಂದ ಆರಂಭವಾದ ಲಘು ರಥೋತ್ಸವ ಪಾದಗಟ್ಟೆಗೆ ತಲುಪಿ ಬಳಿಕ ವಾಪಸಾಯಿತು.ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಅರ್ಚಕರು ವಿಶೇಷ ಪೂಜೆ ನೆರೆವೇರಿಸಿದರು. ನಂತರ ದೇವರ ದರ್ಶನವನ್ನು ಭಕ್ತರು ಸಾಲಾಗಿ ಸರತಿಯಲ್ಲಿ ನಿಂತು ಪಡೆದರು. ಸುತ್ತಮುತ್ತಲಿನ ಗ್ರಾಮದ ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.