ADVERTISEMENT

ಕುಕನೂರು | ಬ್ರಿಟಿಷರ ನುಡುಗಿಸಿದ ಸಂಗೊಳ್ಳಿ ರಾಯಣ್ಣ: ಈಶಪ್ಪ ಮಳಗಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:08 IST
Last Updated 2 ಸೆಪ್ಟೆಂಬರ್ 2025, 5:08 IST
ಕುಕನೂರಿನ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು
ಕುಕನೂರಿನ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು   

ಪ್ರಜಾವಾಣಿ ವಾರ್ತೆ

ಕುಕನೂರು: ‘ಬ್ರಿಟಿಷರನ್ನು ನಡುಗಿಸಿದ ದೇಶಪ್ರೇಮಿ ವೀರ ಸಂಗೊಳ್ಳಿ ರಾಯಣ್ಣ ದೇಶಕ್ಕೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮೊಟ್ಟ ಮೊದಲಿಗರು’ ಎಂದು ಪ್ರಾಚಾರ್ಯ ಈಶಪ್ಪ ಮಳಗಿ ಹೇಳಿದರು.

ಪಟ್ಟಣದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ರೈತರ ಪರವಾಗಿ ತೆರಿಗೆ ವಿರುದ್ಧ ದಂಗೆ ಮಾಡಿದ ಮಹಾನ್ ಚೇತನ್ ಸಂಗೊಳ್ಳಿ ರಾಯಣ್ಣ ಅವರು ಗೆರಿಲ್ಲಾ ಯುದ್ಧದ ಮಾದರಿಯಲ್ಲಿ ದಂಗೆ ಮಾಡಿ ಬ್ರಿಟಿಷರನ್ನು ನಿದ್ದೆಗೆಡಿಸಿದರು’ ಎಂದರು.

ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಮೆರವಣಿಗೆಯು ರಾಯಣ್ಣನ ವೃತ್ತದಿಂದ ಅಂಬೇಡ್ಕರ್ ವೃತ್ತ ಹಾಗೂ ನಗರದ ಪ್ರಮುಖ ರಾಜಬೀದಿಗಳಲ್ಲಿ ನೂರಾರು ಮಹಿಳೆಯರ ಕುಂಭ, ಕಳಸದೊಂದಿಗೆ ವೈಭವದಿಂದ ನೆರವೇರಿತು.

ವಿರೂಪಾಕ್ಷಯ್ಯ ಗುರುವಿನ, ಮಂಜುನಾಥಯ್ಯ ಗುರುವಿನ, ಸಮಾಜದ ತಾಲ್ಲೂಕ ಅಧ್ಯಕ್ಷ ಮಂಜುನಾಥ್ ಕಡಮನಿ, ಶೇಖಪ್ಪ ಕಂಬಳಿ, ಶರಣಪ್ಪ ಕೊಪ್ಪದ್, ಮಲ್ಲಪ್ಪ ಚಳಮಾರದ, ದೇವಪ್ಪ ಸೋಬಾನಾದ್, ಶ್ರೀನಿವಾಸ್ ನಿಂಗಾಪುರ, ವೀರಪ್ಪ ಚಾಕ್ರಿ, ಸಂಗಪ್ಪ ಕಿಂದ್ರಿ, ಸಂಗಪ್ಪ ಕೊಪ್ಪದ್, ಬಸವರಾಜ ಅಡವಿ, ಮಹೇಶ್ ಕವಲೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.