ಅಳವಂಡಿ: ಸಮೀಪದ ಹಲಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾ.ಪಂ ಮಟ್ಟದ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಗ್ರಾ.ಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ ಚಾಲನೆ ನೀಡಿದರು.
ಮಾಸಿಕ ಸಂತೆಯಲ್ಲಿ ಹಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ವ-ಸಹಾಯ ಗುಂಪಿನ ಮಹಿಳೆಯರು ತಾವೇ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ನಿಟ್ಟಿನಲ್ಲಿ ಅಗತ್ಯ ಮಾರುಕಟ್ಟೆಯ ಉತ್ತಮ ಅವಕಾಶ ಕಲ್ಪಿಸಿ, ಉತ್ಪನ್ನಗಳನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇರಿಸಲಾಯಿತು.
ಪಿಡಿಒ ಅಶೋಕ ರಾಂಪೂರ, ಕಾರ್ಯದರ್ಶಿ ದೊಡ್ಡನಗೌಡ, ತಾಲ್ಲೂಕು ಪಂಚಾಯಿತಿ ಸಂಜೀವಿನಿ ವಲಯ ಮೇಲ್ವಿಚಾರಕ ವೆಂಕಟೇಶ, ಸ್ವೀಪ್ ಯೋಜನೆಯ ನವೀನ್, ಬಿಆರ್‌ಪಿ ಸವಿತಾ, ಸುರಕ್ಷಾ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಲಲಿತಮ್ಮ ಹಿರೇಮಠ, ಕಲ್ಲಮ್ಮ ತೋಟದ, ಸಂಗಮ್ಮ, ಎಂಬಿಕೆ ದ್ಯಾಮಮ್ಮ, ಶ್ರೀದೇವಿ, ಶೋಭಾ, ಶ್ರೀ ದೇವಿ, ಶಿವಲಿಂಗಮ್ಮ ಅನ್ನಪೂರ್ಣ ಹಾಗೂ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.