ADVERTISEMENT

ಕಾರಟಗಿ | ಗ್ರಾಮೀಣ ಸೊಗಡಿನ ಸಂಕ್ರಾಂತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:09 IST
Last Updated 15 ಜನವರಿ 2026, 6:09 IST
ಕಾರಟಗಿಯ ಶರಣಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಗ್ರಾಮೀಣ ಸೊಗಡು ಬಿಂಬಿಸುವ ಸಂಕ್ರಾಂತಿ ಸಂಭ್ರಮದಲ್ಲಿ ಬುಧವಾರ ಪಾಲ್ಗೊಂಡಿದ್ದರು
ಕಾರಟಗಿಯ ಶರಣಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಗ್ರಾಮೀಣ ಸೊಗಡು ಬಿಂಬಿಸುವ ಸಂಕ್ರಾಂತಿ ಸಂಭ್ರಮದಲ್ಲಿ ಬುಧವಾರ ಪಾಲ್ಗೊಂಡಿದ್ದರು   

ಕಾರಟಗಿ: ಪಟ್ಟಣದ ಶರಣಬಸವೇಶ್ವರ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಸಂಕ್ರಾಂತಿ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಬುಧವಾರ ನಡೆಯಿತು.

ಮಕ್ಕಳು ಗ್ರಾಮೀಣ ಭಾಗದ ವಸ್ತ್ರಗಳನ್ನು ಧರಿಸಿ, ಹಳ್ಳಿಯ ಜನರು ಸುಗ್ಗಿ ಕಾಲದಲ್ಲಿ ಮಾಡುವ ಕೆಲಸಗಳನ್ನು ಮಾಡಿ ಗಮನ ಸೆಳೆದರು. ಭತ್ತದ ಸಸಿ, ಕಟಾವು, ರಾಶಿ ಮಾಡುವುದು, ಬೀಸುವ ಕಲ್ಲಿನಲ್ಲಿ ಕುಟ್ಟುವುದು, ಬೀಸುವುದು, ತರಕಾರಿ ಮಾರುಕಟ್ಟೆ, ಭಾವಿಯ ನೀರು ಸೇದುವುದು, ಕಟ್ಟಿಗೆಯ ಒಲೆಯ ಮೇಲೆ ಅಡುಗೆ ಮಾಡುವುದು, ಶರಣಬಸವೇಶ್ವರ ಕುಟೀರ, ಹಬ್ಬದ ಸಿಹಿ ತಿನಿಸುಗಳ ತಯಾರಿ, ಹಸುವಿನ ಹಾಲು ಕರೆಯುವುದು, ಎತ್ತಿನ ಬಂಡಿಯಲ್ಲಿ ಪ್ರಯಾಣಿಸುವುದು, ಗುಡಿಸಲಿನಲ್ಲಿ ಅವಿಭಕ್ತ ಕುಟುಂಬ ವಾಸಿಸುವುದು, ಮಕ್ಕಳಿಗೆ ಗ್ರಾಮೀಣ ಸೊಗಡಿನ ಬಟ್ಟೆ ಧರಿಸಿದ ದೃಶ್ಯಗಳನ್ನು ಪ್ರದರ್ಶಿಸಿದರು. 

ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ.ಶೆಟ್ಟರ್ ಹಾಗೂ ಶಿಲ್ಪಾ ಆನಂದ ದಿವಟರ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಜಗದೀಶ ಅವರಾದಿ, ಕಾರ್ಯದರ್ಶಿ ಚಂದ್ರಶೇಖರ ಸೋಮಲಾಪೂರ, ಖಜಾಂಚಿ ಕೊಟಗಿ ಮಲ್ಲಿಕಾರ್ಜುನ ನಿರ್ದೇಶಕರಾದ ಸಿದ್ರಾಮಪ್ಪ ಪಲ್ಲೇದ, ರುದ್ರೇಶ ಗಣಾಚಾರಿ, ಮಲ್ಲಿಕಾರ್ಜುನ ಹಿಂದಪುರ, ರಾಕೇಶ ಕಂಚಿ, ಪ್ರವೀಣಕುಮಾರ ಗದ್ದಿ, ಮುಖ್ಯಗುರುಗಳು, ಶಿಕ್ಷಕರು, ಪಾಲಕರು ಮಕ್ಕಳು ಇದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.