ADVERTISEMENT

ತಾವರಗೇರಾ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:05 IST
Last Updated 11 ಜನವರಿ 2026, 6:05 IST
ತಾವರಗೇರಾ ಪಟ್ಟಣದ ಗ್ಲೋಬಲ್ ಸೆಂಟ್ರಲ್ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು
ತಾವರಗೇರಾ ಪಟ್ಟಣದ ಗ್ಲೋಬಲ್ ಸೆಂಟ್ರಲ್ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು   

ತಾವರಗೇರಾ: ಪಟ್ಟಣದ ಗ್ಲೋಬಲ್ ಸೆಂಟ್ರಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಮಕ್ಕಳು ತಯಾರಿಸಿದ ಸೌರಮಂಡಲ, ವಾಯು ಮಾಲಿನ್ಯ, ಜಲ ಮಾಲಿನ್ಯ ತಡೆಗಟ್ಟುವ ಕ್ರಮಗಳು, ಗಣಕಯಂತ್ರದ ಉಪಯೋಗ, ರಕ್ತದ ಗುಂಪುಗಳು ಇನ್ನು ಹಲವಾರು ಬಗೆಯ ಮಾದರುಗಳನ್ನು ಪ್ರದರ್ಶನ ಮಾಡಲಾಯಿತು.

ಶಿಕ್ಷಣ ಸಂಯೋಜಕ ರಾಗಪ್ಪ ಶ್ರೀರಾಮ್, ಅನುದಾನಿತ ಶಾಲೆಗಳ ಒಕ್ಕೂಟದ ತಾಲೂಕ ಅಧ್ಯಕ್ಷರಾದ ಪಂಪಾಪತಿ ಕೊರ್ಲಿ, ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ಮಲ್ಲಪ್ಪ ಗದ್ದಿ, ಮುಖ್ಯಶಿಕ್ಷಕಿ ಚೈತ್ರ ಹಸಬಿ, ವಿವಿಧ ಶಾಲೆಗಳ‌ಮಕ್ಕಳು ಶಿಕ್ಷಕರು ಪಾಲಕರು‌ ಸಿಬ್ಬಂದಿ ಇದ್ದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.