ADVERTISEMENT

ಕಸ ಬಿಸಾಡದೇ ಬೇರ್ಪಡಿಸಿ ವಾಹನಗಳಲ್ಲಿ ಹಾಕಿ: ಪುರಸಭೆ ಮುಖ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:09 IST
Last Updated 23 ಮೇ 2025, 16:09 IST
ಕಾರಟಗಿಯ 3ನೇ ವಾರ್ಡ್‌ನಲ್ಲಿಯ ನಿವಾಸಿಗಳಿಗೆ ಕಸ ಸಂಗ್ರಹಣೆಗೆ ಬುಟ್ಟಿಗಳನ್ನು ಶುಕ್ರವಾರ ಪುರಸಭೆಯಿಂದ ಉಚಿತವಾಗಿ ವಿತರಿಸಲಾಯಿತು
ಕಾರಟಗಿಯ 3ನೇ ವಾರ್ಡ್‌ನಲ್ಲಿಯ ನಿವಾಸಿಗಳಿಗೆ ಕಸ ಸಂಗ್ರಹಣೆಗೆ ಬುಟ್ಟಿಗಳನ್ನು ಶುಕ್ರವಾರ ಪುರಸಭೆಯಿಂದ ಉಚಿತವಾಗಿ ವಿತರಿಸಲಾಯಿತು   

ಕಾರಟಗಿ: ‘ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ, ಪರಿಸರ ಹಾಳು ಮಾಡದೇ, ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಪುರಸಭೆಯ ವಾಹನಗಳು ಬಂದಾಗ ಅದರಲ್ಲೇ ಹಾಕಿ ಪಟ್ಟಣದ ಸುಂದರತೆ ಕಾಪಾಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಹೇಳಿದರು.

ಪಟ್ಟಣದ 3ನೇ ವಾರ್ಡ್‌ನಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹಕ್ಕೆ ಹಸಿರು, ನೀಲಿ ಬಣ್ಣ ಕಸದ ಬುಟ್ಟಿಗಳನ್ನು ಶುಕ್ರವಾರ ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದು ಸಾಂಕೇತಿಕವಾಗಿ ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಎಲ್ಲಾ ವಾರ್ಡ್‌ಗಳಿಗೂ ಬುಟ್ಟಿಗಳನ್ನು ವಿತರಿಸಲಾಗುವುದು. ಜನರು ಮನೆಯಲ್ಲಿ ಹಸಿ, ಒಣ ಕಸವನ್ನು ಬೇರ್ಪಡಿಸಿ, ನಮ್ಮ ವಾಹನಗಳು ಬಂದಾಗ ನೀಡಬೇಕು. ವ್ಯಾಪಾರಿಗಳೂ ರಸ್ತೆಗೆ ಕಸ ಚೆಲ್ಲದೇ ಸಂಗ್ರಹಿಸಿಟ್ಟು ಪುರಸಭೆಯ ವಾಹನದಲ್ಲೇ ವಿಲೇವಾರಿ ಮಾಡಬೇಕು. ಪಟ್ಟಣದ ಸ್ವಚ್ಛತೆ ಕಾಪಾಡಲು ಸಮುದಾಯವೂ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದರು.

ADVERTISEMENT

ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.