ADVERTISEMENT

ಬಿಜೆಪಿಯದು ಢೋಂಗಿ ಹಿಂದುತ್ವ: ಶಿವರಾಜ ತಂಗಡಗಿ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:48 IST
Last Updated 19 ಸೆಪ್ಟೆಂಬರ್ 2021, 4:48 IST
ಶಿವರಾಜ್‍ ತಂಗಡಗಿ
ಶಿವರಾಜ್‍ ತಂಗಡಗಿ   

ಕೊಪ್ಪಳ: ‘ಹಿಂದೂ, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದು ಹಿಂದೂ ದೇವಾಲಯಗಳನ್ನು ಒಡೆದು ಹಾಕುತ್ತಿದ್ದಾರೆ. ಇವರಿಗೆ ಅಧಿಕಾರಕ್ಕಾಗಿ ಮಾತ್ರ ಹಿಂದುತ್ವ ಬೇಕು. ಬಿಜೆಪಿಗರು ಡೋಂಗಿ ಹಿಂದುಗಳು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ಶಿವರಾಜ ತಂಗಡಗಿ ಟೀಕಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಆಡಳಿತದ ವಿರುದ್ಧ ಕಾಂಗ್ರೆಸ್ ಜನಾಂದೋಲನ ರೂಪಿಸಲಿದೆ. ದೇಶ ಹಾಗೂ ರಾಜ್ಯದ ಹಿತ ಕಾಯಲು ಬದ್ಧವಾಗಿದ್ದು, ಜನ ಹಿತಕ್ಕಾಗಿ ಕಾಂಗ್ರೆಸ್ ಇನ್ನು ಮುಂದೆ ಎಲ್ಲ ಹಂತದಲ್ಲಿಯೂ ಪ್ರಬಲ ಹೋರಾಟ ನಡೆಸಲಿದೆ ಎಂದರು.

ದೇಶ ಕಟ್ಟುವ ಕೆಲಸ ಕಾಂಗ್ರೆಸ್ ಮಾಡಿದರೆ ದೇಶ ಒಡೆಯುವ ಮತ್ತು ಜನಸಾಮಾನ್ಯರ ಬದುಕು ಮತ್ತು ದೇಶದ ಸಂಪತ್ತು ಹಾಳಾಗಲು ಬಿಜೆಪಿಗರು ಹೊರಟಿದ್ದು, ಅವರ ನೀತಿಗಳಿಂದ ದೇಶ ಇಂದು ಅನೇಕ ಸಮಸ್ಯೆಗಳಿಗೆ ಬಲಿಯಾಗಿ ಬೆಲೆ ಏರಿಕೆ ಸೇರಿ ಇನ್ನಿತರ ಸಮಸ್ಯೆಗಳು ಉಲ್ಭಣಗೊಂಡಿವೆ.ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲುಬಿಜೆಪಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ADVERTISEMENT

ಕಾಂಗ್ರೆಸ್ ದೇಶಕ್ಕಾಗಿ ಆಸ್ತಿ ಮಾಡಿದರೆ ಇವರು ದೇಶದ ಆಸ್ತಿಗಳನ್ನು ಖಾಸಗಿಯವರೆಗೆ ಮಾರಾಟ ಮಾಡುತ್ತಿದ್ದಾರೆ. ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಮುಂದೆ ಯಡಿಯೂರಪ್ಪ ಅವರ ನಿರ್ಧಾರ ಗೊತ್ತಗಾಲಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಇರುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ. ಇನ್ನು ಓವೈಸಿಯ ಎಐಎಂಐಎಂ ಇದು ಬಿಜೆಪಿ ಪ್ರಾಯೋಜಿತವಾಗಿದ್ದು, ಮುಸ್ಲಿಂ ಮತಗಳನ್ನು ಒಡೆಯುವ ತಂತ್ರವಾಗಿದೆ ಎಂದರು.

ಶಾಸಕ ರಾಘವೇಂದ್ರಹಿಟ್ನಾಳ ಮಾತನಾಡಿ, ಬಿಜೆಪಿ ಎಲ್ಲವನ್ನು ಖಾಸಗೀಕರಣ ಮಾಡುತ್ತಿ ರುವುದುಸಂವಿಧಾನ ವಿರೋಧಿ ನಡೆ. ಇದರ ಹಿಂದೆ ಮೀಸಲಾತಿ ತೆಗೆಯುವ ಹುನ್ನಾರ ಅಡಗಿದೆ. ಆದ್ದರಿಂದ ದೇಶದ ಜನರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಶಾ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ರಾಜ್ಯ ಮಹಿಳಾ ಕಾಂಗ್ರೆಸ್ ನ ಶೈಲಾಜಾ ಹಿರೇಮಠ, ಜಿಲ್ಲಾ ವಕ್ತಾರ ರವಿ ಕುರಕೋಡ, ಭರಮಪ್ಪ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.