ADVERTISEMENT

‘ಶಿವಯೋಗಿ ಸಿದ್ಧರಾಮೇಶ್ವರರದ್ದು ಮಾದರಿ ವ್ಯಕ್ತಿತ್ವ’

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 5:10 IST
Last Updated 24 ಜನವರಿ 2026, 5:10 IST
ಯಲಬುರ್ಗಾ ಪಟ್ಟಣದಲ್ಲಿ ತಾಲ್ಲೂಕಾಡಳಿತ ಹಾಗೂ ಸಿದ್ಧರಾಮೇಶ್ವರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು. ಭೋವಿ ಸಮಾಜದ ಶ್ರೀಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು
ಯಲಬುರ್ಗಾ ಪಟ್ಟಣದಲ್ಲಿ ತಾಲ್ಲೂಕಾಡಳಿತ ಹಾಗೂ ಸಿದ್ಧರಾಮೇಶ್ವರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು. ಭೋವಿ ಸಮಾಜದ ಶ್ರೀಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು   

ಯಲಬುರ್ಗಾ: ಸಿದ್ಧರಾಮೇಶ್ವರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲ್ಲೂಕಾಡಳಿತದ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‘ಸಿದ್ಧರಾಮೇಶ್ವರರ 853ನೇ ಜಯಂತ್ಯುತ್ಸವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ’ ಎಂದರು.

‘ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಿದ್ಧರಾಮೇಶ್ವರರ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು. ಮುಖ್ಯವಾಗಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಅವುಗಳನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಮತ್ತು ಶರಣರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ,‘ಸಿದ್ಧರಾಮೇಶ್ವರರು ಅಸಹಾಯಕರು, ಶೋಷಣೆಗೆ ಒಳಗಾದವರ ಧ್ವನಿಯಾಗಿದ್ದ ಮಹಾನ್ ಯೋಗಿಯಾಗಿ ಗುರುತಿಸಿಕೊಂಡವರು. ಸಕಲ ಜೀವಾತ್ಮಕ್ಕೆ ಲೇಸು ಬಯಸಿದ ಸಿದ್ಧರಾಮೇಶ್ವರರ ವ್ಯಕ್ತಿತ್ವ ಅನುಕರಣೀಯ’ ಎಂದರು.

ಗಜೇಂದ್ರಗಡದ ಎಫ್.ಎಸ್.ಕರಿದುರಗಣ್ಣವರ ಉಪನ್ಯಾಸ ನೀಡಿದರು. ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಸಮಾಜದ ಜಿಲ್ಲಾ ಮುಖಂಡ ಬಸವರಾಜ ವಣಗೇರಿ, ಕೋಳಿಹಾಳ ಹನಮಂತಪ್ಪ ವಡ್ಡರ ಸೇರಿ ಅನೇಕರು ಮಾತನಾಡಿದರು.

ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಮಹಿಳೆಯರಿಂದ ಕುಂಭಗಳ ಮೆರವಣಿಗೆ ನಡೆಯಿತು. ಭೋವಿ ಸಮಾಜದ ಅಧ್ಯಕ್ಷ ದುರಗಪ್ಪ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪ್ರಕಾಶ ನಾಶಿ, ನಾಗಪ್ಪ ವಡ್ಡರ, ಹುಲಗಪ್ಪ ಬಂಡಿವಡ್ಡರ, ಸಿದ್ರಾಮಪ್ಪ ವಡ್ಡರ ಹಾಗೂ ಪ್ರವೀಣ ಸೇರಿ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.