ADVERTISEMENT

ಆದರ್ಶ ವಿದ್ಯಾಲಯಕ್ಕೆ ಶೇ. 100 ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 12:10 IST
Last Updated 10 ಆಗಸ್ಟ್ 2021, 12:10 IST
ಕನಕಗಿರಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಆಸ್ರಾಮಹೀನ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದ ಕಾರಣ ತಾಯಿ ನೌನೀನ್ ಆಫ್ಸನ್ ಹಾಗೂ ತಂದೆ ಬಿ. ಎಚ್.ಕಲೀಲ್ ಉಲ್ಲಾ ಅವರು ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು
ಕನಕಗಿರಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಆಸ್ರಾಮಹೀನ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದ ಕಾರಣ ತಾಯಿ ನೌನೀನ್ ಆಫ್ಸನ್ ಹಾಗೂ ತಂದೆ ಬಿ. ಎಚ್.ಕಲೀಲ್ ಉಲ್ಲಾ ಅವರು ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು   

ಕನಕಗಿರಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು,ಪಟ್ಟಣದ ಆದರ್ಶ ವಿದ್ಯಾಲಯದ ಶೇ. 100 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದ 60 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಮೀಪದ ಸುಳೇಕಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ನೌನೀನ್ ಆಫ್ಸನ್ ಬಿ.ಎಚ್. ಕಲೀಲ್ ಉಲ್ಲಾ ಅವರ ಪುತ್ರಿ ಆಸ್ರಾಮಹೀನ್ ಅವರು 625 ಅಂಕಗಳಿಗೆ 623 ಅಂಕ ಪಡೆದು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದಾರೆ.

ADVERTISEMENT

ಆಸ್ರಾಮಹೀನ ಅವರು ಕನ್ನಡ-100, ಇಂಗ್ಲಿಷ್-125, ಹಿಂದಿ-100, ಸಮಾಜ ವಿಜ್ಞಾನ-100, ವಿಜ್ಞಾನ-98 ಹಾಗೂ ಗಣಿತದಲ್ಲಿ 100 ಅಂಕ ಪಡೆದಿದ್ದಾರೆ.

ಬಸವರೆಡ್ಡಿ (ಶೇ.93.92) ಹಾಗೂ ಹನುಮೇಶ ಪೂಜಾರ (ಶೇ.91 52) ಅಂಕ ಪಡೆದು ಶಾಲೆಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಶಿವಕುಮಾರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಕನಕರೆಡ್ಡಿ ಕೆರಿ ತಿಳಿಸಿದ್ದಾರೆ.

ಆಸ್ರಾಮಹೀನ್ ಅವರ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ವಿವಿ ಗೊಂಡಬಾಳ ಸಂತಸ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.