ಕಾರಟಗಿ: ತಾಲ್ಲೂಕಿನ ಬೇವಿನಾಳ ಗ್ರಾಮದಲ್ಲಿ ಸಂತ ಕನಕದಾಸರ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳನ್ನು 15 ದಿನಗಳಲ್ಲಿ ಪತ್ತೆ ಮಾಡಿ, ಕಠಿಣ ಕ್ರಮಕ್ಕೆ ಒಳಪಡಿಸಬೇಕು. ಸಂತರ, ಶರಣರ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ಒದಗಿಸಿ, ಸಾಮಾಜಿಕ ಸಾಮರಸ್ಯ ಹದಗೆಡಿಸದಂತೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ತಾಲ್ಲೂಕು ಹಾಲುಮತ ಸಮಾಜದವರು ಪ್ರವಾಸಿ ಮಂದಿರದಿಂದ ಬೈಕ್ ರ‍್ಯಾಲಿ ಮೂಲಕ ಗುರುವಾರ ಉಪ ತಹಶೀಲ್ದಾರ್ ಜಗದೀಶಕುಮಾರ್‌ಗೆ ಮನವಿ ಸಲ್ಲಿಸಿದರು.
ಸಮಾಜದ ಮುಖಂಡ ವೀರೇಶ ಸಾಲೋಣಿ ಮಾತನಾಡಿ, ‘ದಾಸ ಶ್ರೇಷ್ಠ ಕನಕದಾಸರ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಖಂಡನೀಯ’ ಎಂದರು.
ಮುಖಂಡ ಶರಣಪ್ಪ ಪರಕಿ ಮಾತನಾಡಿದರು.
ಮುಖಂಡರಾದ ಉಮೇಶ ಭಂಗಿ, ಪುರಸಭೆ ಮಾಜಿ ಸದಸ್ಯ ಹೊಳೆಯಪ್ಪ ದೇವರಮನಿ, ಸದಸ್ಯ ಮಂಜುನಾಥ ಮೇಗೂರು ನಿವೃತ್ತ ಪಿಎಸ್‍ಐ ಕೆ. ಮಲ್ಲಪ್ಪ, ರೈತ ಮುಖಂಡರಾದ ಮರಿಯಪ್ಪ ಸಾಲೋಣಿ, ಪ್ರಮುಖರಾದ ಶರಣಪ್ಪ ಕರಡಿ, ಲಿಂಗಪ್ಪ ರೌಡಕುಂದಿ, ಮಂಜುನಾಥ ಸುದ್ದಿ, ಸೋಮನಾಥ ಗಚ್ಚಿನಮನಿ, ರಮೇಶ ಮಾವಿನಮಡಗು, ಚಂದ್ರು ಆನೆಹೊಸೂರು, ಅಯ್ಯಪ್ಪ ಸುದ್ದಿ, ಶಂಕ್ರಪ್ಪ ಗಚ್ಚಿನಮನಿ, ವಿರುಪಣ್ಣ ಮೂಲಿಮನಿ, ದೇವರಾಜ್ ಜಮಾಪುರ, ಕಾರಮಿಂಚಪ್ಪ ಜಮಾಪುರ, ಶಿವಮೂರ್ತಿ ಬಾರ್ಸಿ, ಜನಗಂಡೆಪ್ಪ ಪೂಜಾರಿ, ಶಿವಪ್ಪ ಬೇವಿನಾಳ, ಹನುಮಂತಪ್ಪ ವಾಲೀಕಾರ ಪನ್ನಾಪುರ, ವಿಕ್ರಮ್ ಬೇವಿನಾಳ, ರಮೇಶ ಕುಂಟೋಜಿ ವಕೀಲ, ರಾಮಚಂದ್ರ ವಕೀಲ, ಮಾರುತಿ ವಕೀಲ, ಬಸವರಾಜ ಬೂದಗುಂಪಾ, ವೀರೇಶ ಹಾಲಸಮುದ್ರ, ಬಜ್ಜೆಪ್ಪ ಬೇವಿನಾಳ, ಹನುಮಂತಪ್ಪ ಕುಂಟೋಜಿ, ಉಮೇಶ ಹೊಸ ಕುರುಬರು, ಲಿಂಗಪ್ಪ ಗೌರಿಪುರ, ನಾಗಪ್ಪ ಸುಂಕದ, ಅಗರೆಪ್ಪ ಕೊಟ್ನೆಕಲ್, ಹನುಮಂತಪ್ಪ ಶಾಲಿಗನೂರು, ನಾಗಪ್ಪ ನವಲಿ, ಅಮರೇಶಪ್ಪ ತಳವಾರ, ಗಾದಿಲಿಂಗಪ್ಪ, ಮರಿಸ್ವಾಮಿ, ಮುದುಕಪ್ಪ ಕುರಿ, ಸಿದ್ದಪ್ಪ ಕಂಪ್ಲಿ, ಹುಲಗಪ್ಪ ಬೆನ್ನೂರು, ಚಿದಾನಂದ ಗದ್ದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.