ಪ್ರಾತಿನಿಧಿಕ ಚಿತ್ರ
ಕೊಪ್ಪಳ: ಕೊಪ್ಪಳ ಸುತ್ತಮುತ್ತಲಿನ ಪರಿಸರದಲ್ಲಿ ಹೊಸ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗುತ್ತಿರುವ ಸರ್ಕಾರದ ಧೊರಣೆಗೆ ಗಿಣಗೇರ ನಾಗರಿಕ ಹೋರಾಟ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ.
ತಾಲ್ಲೂಕಿನ ಗಿಣಗೇರಾ, ಅಲ್ಲಾನಗರ, ಬೇವಿನಹಳ್ಳಿ, ಕನಕಾಪುರ, ಹಿರೇಬಗನಾಳ, ಹಿರೇಕಾಸನಖಂಡಿ, ಹಾಲವರ್ತಿ ಹೀಗೆ ಅನೇಕ ಗ್ರಾಮಗಳಿಗೆ ಹೊಂದಿಕೊಂಡು ಸಾಕಷ್ಟು ಕಾರ್ಖಾನೆಗಳಿದ್ದು, ಮತ್ತೊಂದು ಕಾರ್ಖಾನೆಗೆ ಆಹ್ವಾನಿಸುತ್ತಿರುವುದು ಈಡೀ ಜಿಲ್ಲೆಯನ್ನೆ ಸಂಪೂರ್ಣ ಹಾಳುಮಾಡಲು ಹೊರಟಂತಿದೆ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ನೀರಿಗಾಗಿ ವಿವಿಧ ಕಂಪನಿಗಳು ಮುತ್ತಿಕೊಳ್ಳುತ್ತಿವೆ. ಭವಿಷ್ಯತ್ತಿನಲ್ಲಿ ಕುಡಿಯಲು ನೀರಿಲ್ಲದಂತಾಗುತ್ತದೆ. ಅಲ್ಲದೇ ಪರಿಸರವು ಕೂಡಾ ಹಾಳಾಗಿ ಉಸಿರಾಟಕ್ಕೆ ಶುದ್ಧಗಾಳಿ ಇಲ್ಲದಂತಾಗುತ್ತದೆ. ಫಲವತ್ತಾದ ಕೃಷಿಭೂಮಿಯನ್ನು ಕಳೆದುಕೊಂಡು ರೈತರು ಉದ್ಯೋಗಕ್ಕಾಗಿ ರಾಜ್ಯಬಿಟ್ಟಿ ಮತ್ತೊಂದು ರಾಜ್ಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಮುಗ್ದ ರೈತರವನ್ನು ವಂಚಿಸಿ ಭೂಮಿಯನ್ನು ಕಬಳಿಸುವ ವ್ಯವಸ್ಥೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿಯೇ ಕಾರ್ಯನಿರತವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
‘ಈ ಎಲ್ಲ ಕಾರಣಗಳಿಂದ ಕೊಪ್ಪಳ ವ್ಯಾಪ್ತಿಯ ಜನರು ತೀವ್ರ ವಿರೋಧಕ್ಕಾಗಿ ಮುಂದೆಬರಬೇಕಾದ ಅನಿವಾರ್ಯತೆಯಿದೆ. ಇಲ್ಲಿಯ ಜನರ ಅಸ್ತಿತ್ವ ಮತ್ತು ನೆಮ್ಮದಿಯ ಜೀವನಕ್ಕಾಗಿ ಕಾರ್ಖಾನೆಗಳ ಆಗಮಿಸುವಿಕೆಯನ್ನು ತಡೆಗಟ್ಟಬೇಕಾಗಿದೆ. ಈ ಕೂಡಲೇ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಒಪ್ಪಿಗೆ ನೀಡಿದೇ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಹೋರಾಟ ಸಮಿತಿ ಮುಖಂಡರಾದ ಶರಣು ಗಡ್ಡಿ, ಮಂಗಳೇಶ ರಾತೋಡ್, ಹನುಮಂತ ಕಟಗಿ, ಸುರೇಶ ಕಲಾಲ್ ಅವರು ಮಾನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.