ಯಲಬುರ್ಗಾ: ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಯಾಗಲು ಹಾಗು ಪ್ರತಿಭೆಯನ್ನು ಹೆಚ್ಚಿಸಲು ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗಿವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರಭದ್ರಗೌಡ ಮೂಲಿಮನಿ ತಿಳಿಸಿದರು.
ತಾಲ್ಲೂಕಿನ ಮುಧೋಳ ಗ್ರಾಮದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಹಮ್ಮಿಕೊಂಡು ಪಠ್ಯೇತರ ಚಟುವಟಿಕೆಯಲ್ಲಿಯೂ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುವಂತೆ ಮಾಡಲು ಪಂಚಾಯಿತಿಯ ಅರಿವು ಕೇಂದ್ರಗಳ ವತಿಯಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ಈರಣ್ಣ ತೋಟದ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದನ್ನು ಅಭಿವೃದ್ಧಿಗೊಳಿಸುವ ಮೂಲಕ ಪ್ರತಿಭಾವಂತರನ್ನಾಗಿ ರೂಪಿಸುವ ಕೆಲಸ ಶಾಲಾಮಟ್ಟದಲ್ಲಿ ಆಗಬೇಕಾಗಿದೆ. ಹಾಗೆಯೇ ಪಾಲಕರ ಜವಾಬ್ದಾರಿಯು ಕೂಡಾ ಅಷ್ಟೇ ಮುಖ್ಯವಾಗಿದೆ ಎಂದರು.
ಗ್ರಾ.ಪಂ ವಿಆರ್‌ಡಬ್ಲ್ಯೂ ವೀರಭದ್ರಪ್ಪ ನಿಡಗುಂದಿ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಮಮತಾಜಬಿ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಲ್ಲಪ್ಪ ಜತ್ತಿ, ಹುಸೇನ್ ಮೊತೆಖಾನ, ಆಶಾ ಕಾರ್ಯಕರ್ತೆಯರಾದ ದೇವಕ್ಕ ವಡ್ಡರ, ಗೌರಮ್ಮ, ಹುಸೇನಬಿ, ಜಯಶ್ರೀ ಅಕ್ಕಿ, ಗ್ರಂಥಾಲಯ ಮೇಲ್ವಿಚಾರಕ ಜಗನ್ನಾಥ ಅಕ್ಕಸಾಲಿಗರ ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.