ADVERTISEMENT

ಕುಡಿಯುವ ನೀರಿನ ಅರವಟಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 12:24 IST
Last Updated 20 ಏಪ್ರಿಲ್ 2022, 12:24 IST
ಅಳವಂಡಿ ಸಮೀಪದ ಬಿಕನಳ್ಳಿ ಕ್ರಾಸ್‌ನಲ್ಲಿ ಸ್ದಾಪಿಸಲಾದ ಅರವಟಿಗೆಯಲ್ಲಿ ಜನರು ನೀರು ಕುಡಿಯುತ್ತಿರುವುದು
ಅಳವಂಡಿ ಸಮೀಪದ ಬಿಕನಳ್ಳಿ ಕ್ರಾಸ್‌ನಲ್ಲಿ ಸ್ದಾಪಿಸಲಾದ ಅರವಟಿಗೆಯಲ್ಲಿ ಜನರು ನೀರು ಕುಡಿಯುತ್ತಿರುವುದು   

ಅಳವಂಡಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈನಳ್ಳಿ, ಭಾರತ್ ಸ್ಕೌಟ್ಸ್‌ ಅಂಡ್‌ ಗೈಡ್ಸ್ ಸಂಸ್ಥೆ, ಛತ್ರಪತಿ ಶಿವಾಜಿ ಸ್ಕೌಟ್ಸ್‌ ಘಟಕ ಮತ್ತು ಶಿವಶರಣೆ ಬುಡ್ಡಮ್ಮದೇವಿ ಗೈಡ್ಸ್ ಘಟಕ ಇವರ ಸಹಯೋಗದಲ್ಲಿ ಇಲ್ಲಿನ ಬಿಕನಳ್ಳಿ ಕ್ರಾಸ್‌ನಲ್ಲಿ ಕುಡಿಯುವ ನೀರಿನ ಅರವಟಿಗೆಯನ್ನು ಸ್ಥಾಪಿಸಲಾಗಿದೆ.

ಬಿಕನಳ್ಳಿ ಕ್ರಾಸ್, ಬಿಕನಳ್ಳಿ ಮತ್ತು ಮೈನಳ್ಳಿ ಗ್ರಾಮದಿಂದ ಸ್ವಲ್ಪ ದೂರವಿದ್ದು, ಬೇಸಿಗೆ ಸಮಯದಲ್ಲಿ ಈ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ. ಇದನ್ನು ಅರಿತು ವಿವಿಧ ಸಂಘಟನೆಗಳು ಸಹಕಾರದಲ್ಲಿ ಶಾಲಾ ಮಕ್ಕಳೊಂದಿಗೆ ಸೇರಿಕೊಂಡು ಅರವಟಿಗೆಯನ್ನು ಆರಂಭಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಮೈನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್‌ ಮತ್ತು ಗೈಡ್ಸ್ ಘಟಕವು ಬೇಸಿಗೆ ಸಮಯದಲ್ಲಿ ನೀರಿನ ಅರವಟಿಗೆಯನ್ನು ಆರಂಭಿಸುತ್ತಾ ಬಂದಿರುವುದು ಜನರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ಛತ್ರಪತಿ ಶಿವಾಜಿ ಸ್ಕೌಟ್ಸ್‌ ಘಟಕ ಮತ್ತು ಶಿವಶರಣೆ ಬುಡ್ಡಮ್ಮದೇವಿ ಗೈಡ್ಸ್ ಘಟಕದ ವಿದ್ಯಾರ್ಥಿಗಳು ಪಾಳಿಯ ಪ್ರಕಾರ ಪ್ರತಿದಿನ 4 ವಿದ್ಯಾರ್ಥಿಗಳು ಇಲ್ಲಿನ ಮಡಿಕೆಗಳಿಗೆ ನೀರು ತುಂಬಿಸುತ್ತಾರೆ’ ಎಂದು ಶಾಲಾ ಮುಖ್ಯ ಶಿಕ್ಷಕ ಕುಮಾರ ಹಾಗೂ ಸ್ಕೌಟ್ಸ್‌ ಮಾಸ್ಟರ್‌ ಬಸವರಾಜ ಚಿತ್ತಾಪುರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.