ADVERTISEMENT

‘ಪರಿಸರವೇ ನಮ್ಮೆಲ್ಲರ ಜೀವಾಳ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:58 IST
Last Updated 18 ಜೂನ್ 2025, 15:58 IST
ಕಾರಟಗಿ ತಾಲ್ಲೂಕಿನ ಬೂದಗುಂಪಾದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆ ನಿಮಿತ್ತ ಸಸಿಗಳನ್ನು ನೆಡಲಾಯಿತು
ಕಾರಟಗಿ ತಾಲ್ಲೂಕಿನ ಬೂದಗುಂಪಾದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆ ನಿಮಿತ್ತ ಸಸಿಗಳನ್ನು ನೆಡಲಾಯಿತು   

ಕಾರಟಗಿ: ಮನುಷ್ಯರ ಸ್ವಾರ್ಥದಿಂದ ಪರಿಸರ ನಾಶದಂಚಿನಲ್ಲಿದೆ. ಫಲವಾಗಿ ಗಾಳಿ, ನೀರು ಹಾಗೂ ಆಹಾರ ಕಲುಷಿತವಾಗಿ, ರೋಗಗಳಿಂದ ಬಳಲಬೇಕಾಗಿದೆ. ಇನ್ನಾದರೂ ಜಾಗೃತಗೊಂಡು ಪರಿಸರ ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ನಿಂಗಪ್ಪ ಡಿ. ಆಗಸರ್ ಹೇಳಿದರು.

ತಾಲ್ಲೂಕಿನ ಬೂದಗುಂಪಾದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಸಹಯೋಗದಲ್ಲಿ ಬುಧವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಆಶ್ರಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಸುಂಕದ ಮಾತನಾಡಿ,‘ಪರಿಸರ ಉಳಿಸುವ ಜೊತೆಗೆ ಬೆಳೆಸಬೇಕು. ಅದರೊಂದಿಗೆ ನಮ್ಮ ಅಳಿವು, ಉಳಿವು ಇದೆ ಎಂದರು.

ADVERTISEMENT

ಶಿಕ್ಷಕಿ ನಿರ್ಮಲಾ, ಕೃಷಿ ಮೇಲ್ವಿಚಾರಕ ಎನ್. ಗಂಗಾಧರಪ್ಪ ಮಾತನಾಡಿದರು.

ಶಿಕ್ಷಕರಾದ ಪ್ರಶಾಂತ ಜೋಷಿ, ಶೀಲಾ, ಮಂಜುಳಾ, ಸುನೀತಾ, ಸಚಿನ್, ರಾಜೇಶ್ವರಿ, ರೇಖಾ, ಮುಬಿನ, ವಿಧ್ಯಾರ್ಥಿಗಳು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.