ADVERTISEMENT

ಗಂಗಾವತಿ: ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:48 IST
Last Updated 9 ನವೆಂಬರ್ 2025, 6:48 IST
ಗಂಗಾವತಿ ತಾಲ್ಲೂಕಿ‌ನ ದಾಸನಾಳ ಗ್ರಾಮದ ಬಳಿನ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿಹೋದ ಯುವಕನ ಹುಡುಕಾಟದಲ್ಲಿ ನಿರತರಾದ ಅಗ್ನಿಶಾಮಕ ಸಿಬ್ಬಂದಿ
ಗಂಗಾವತಿ ತಾಲ್ಲೂಕಿ‌ನ ದಾಸನಾಳ ಗ್ರಾಮದ ಬಳಿನ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿಹೋದ ಯುವಕನ ಹುಡುಕಾಟದಲ್ಲಿ ನಿರತರಾದ ಅಗ್ನಿಶಾಮಕ ಸಿಬ್ಬಂದಿ   

ಗಂಗಾವತಿ: ತಾಲ್ಲೂಕಿ‌ನ ದಾಸನಾಳ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿ ಯುವಕ ಕೊಚ್ಚಿಕೊಂಡು ಹೋದ ಘಟನೆ ಶನಿವಾರ ನಡೆದಿದೆ.

ಕೊಪ್ಪಳದ ಮಂಜು‌ನಾಥ (34) ನಾಪತ್ತೆಯಾದ ಯುವಕ.

ಕೊಪ್ಪಳದಿಂದ ದಾಸನಾಳಕ್ಕೆ ಬಂದಿದ್ದ ಶರಣಬಸವ, ಮಂಜುನಾಥ ಇಬ್ಬರು ಯುವಕರು ಕಾಲುವೆಯಲ್ಲಿ ಈಜಲು ಹೋಗಿದ್ದಾರೆ. ನೀರಿನ ರಭಸಕ್ಕೆ ಮಂಜು‌ನಾಥ ಕೊಚ್ಚಿಕೊಂಡು ಹೋಗಿದ್ದು, ಶರಣಬಸವ ಈಜಿ ದಡ ಸೇರಿಕೊಂಡಿದ್ದಾರೆ.

ADVERTISEMENT

ಯುವಕನ ಪತ್ತೆಗೆ ಪೊಲೀಸ್ ಇಲಾಖೆ, ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹುಡುಕಾಟ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.