ADVERTISEMENT

‘ಕ್ರಾಂತಿಗೆ ಮುನ್ನುಡಿ ಬರೆದಿದ್ದ ಶರಣರು’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 4:37 IST
Last Updated 21 ಡಿಸೆಂಬರ್ 2021, 4:37 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯನ್ನು ಗಣ್ಯರು ಉದ್ಘಾಟಿಸಿದರು
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯನ್ನು ಗಣ್ಯರು ಉದ್ಘಾಟಿಸಿದರು   

ಕುಷ್ಟಗಿ: ಇಲ್ಲಿಯ ಬಸವ ಭವನದಲ್ಲಿ ಈಚೆಗೆ ಬಸವಾದಿ ಶರಣರ ‘ವಚನ ಚಿಂತನ’ ಸಾಪ್ತಾಹಿಕ ಕಾರ್ಯಕ್ರಮ ನಡೆಯಿತು.

‘ಶರಣ ದಂಪತಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರ ಬದುಕು ಹಾಗೂ ವಚನ ಸಾಹಿತ್ಯ’ ಕುರಿತು ಮಾತನಾಡಿದ ನಿವೃತ್ತ ಶಿಕ್ಷಣಾಧಿಕಾರಿ ಎಚ್‌.ಜಿ.ಹಂಪಣ್ಣ,‘ಶರಣ ಪರಂಪರೆ ಇಡೀ ವಿಶ್ವದಲ್ಲಿಯೇ ವಿಶಿಷ್ಟವಾದುದು. ಜಾತಿಯತೆ ಅಸಮಾನತೆ ವಿರುದ್ಧ 12ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಬಸವಾದಿ ಶರಣರ ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ ಎನಿಸುತ್ತಲೇ ಇರುತ್ತವೆ. ಆಗಿನ ಕಾಲದಲ್ಲಿ ನಡೆದ ಜನಾಂದೋಲನದಲ್ಲಿ ಅನುಭವ ಮಂಟಪದ ಮೂಲಕ ಸಹಸ್ರ ಜನ ಶರಣರು ಬಸವಣ್ಣನವರೊಂದಿಗೆ ಕೈಜೋಡಿಸಿದ್ದರು’ ಎಂದರು.

ಅನುಭವ ಮಂಟಪದಲ್ಲಿ ಶರಣದಂಪತಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರ ಜೀವನ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿತ್ತು. ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರು ರಚಿಸಿದ ಬೆಡಗಿನ ಮತ್ತು ಲಿಂಗಾಂಗ ಯೋಗದ ಬಗ್ಗೆ ರಚಿಸಿರುವ ವಚನಗಳ ಅಧ್ಯಯನ ನಡೆಸಿ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯಬೇಕು ಎಂದರು.

ADVERTISEMENT

ಮಾಜಿ ಶಾಸಕ ಕೆ.ಶರಣಪ್ಪ, ಬಸವ ಸಮಿತಿಯ ಪ್ರಮುಖರಾದ ಶಿವಸಂಗಪ್ಪ ಬಿಜಕಲ್, ಶರಣಬಸಪ್ಪ ಸುಂಕದ, ಹ.ಯ.ಈಟಿಯವರ, ನೂರಂದಪ್ಪ ಕಂದಕೂರು, ಶಿವಶಂಕರಪ್ಪ ಗೋನಾಳ, ಮಲ್ಲಪ್ಪ ಹೊರಪೇಟೆ, ಹಡಪದ ಸಮುದಾಯದ ಗೌರವಾಧ್ಯಕ್ಷ ದೊಡ್ಡಪ್ಪ ಹೊಸೂರು, ಅಧ್ಯಕ್ಷ ಎಚ್.ಪುತ್ರಪ್ಪ, ಕಾರ್ಯದರ್ಶಿ ಮಹಾಂತೇಶ ಅಮರಾವತಿ, ಫಕೀರಪ್ಪ ಹೊಸವಕಲ್ಲ ಇದ್ದರು. ಶಿಕ್ಷಕ ಎಚ್.ಜಿ.ಮಹೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.