ADVERTISEMENT

ಕೊಪ್ಪಳ | ಕಾಂಗ್ರೆಸ್‌ ನಾಯಕರ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 6:53 IST
Last Updated 5 ಜೂನ್ 2024, 6:53 IST
ಕಾಂಗ್ರೆಸ್‌ ನಾಯಕರು ಕೊಪ್ಪಳದಲ್ಲಿ ಮಂಗಳವಾರ ಸಂಗಣ್ಣ ಕರಡಿ ಮನೆಗೆ ತೆರಳಿ ವಿಜಯೋತ್ಸವ ಆಚರಿಸಿದರು
ಕಾಂಗ್ರೆಸ್‌ ನಾಯಕರು ಕೊಪ್ಪಳದಲ್ಲಿ ಮಂಗಳವಾರ ಸಂಗಣ್ಣ ಕರಡಿ ಮನೆಗೆ ತೆರಳಿ ವಿಜಯೋತ್ಸವ ಆಚರಿಸಿದರು   

ಕೊಪ್ಪಳ: ರಾಜಶೇಖರ ಹಿಟ್ನಾಳ ಅವರ ಗೆಲುವು ಖಚಿತವಾಗುತ್ತಿದ್ದ ಪಕ್ಷದ ನಾಯಕರು ಹಾಗೂ ಮುಖಂಡರು ಪರಸ್ಪರ ಬಣ್ಣ ಎರಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮ ಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕರು ಮತ ಎಣಿಕೆ ಕೇಂದ್ರದ ಮುಂದೆ ಸಂಭ್ರಮಿಸಿದರು. ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ಮುಖಂಡರ ಸಂಗಣ್ಣ ಕರಡಿ ಮನೆ ತೆರಳಿ ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿದರು.

ಸಂಗಣ್ಣ ಕರಡಿ ಮಾತನಾಡಿ ‘ಕೊಪ್ಪಳ ಲೋಕಸಭಾ ಕ್ಷೇತ್ರದ ಮೊದಲಿನಿಂದ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಕಳೆದ ಎರಡು ಅವಧಿಯಲ್ಲಿ ಬಿಜೆಪಿಯಿಂದ ನಾನು ಸಂಸದನಾಗಿದ್ದೆ. ಈ ಗೆಲುವಿಗೆ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಿದ್ದಾರೆ’ ಎಂದರು.

ADVERTISEMENT

‘ಕಾಂಗ್ರೆಸ್ ಗೆಲುವು ಪ್ರಜಾಪ್ರಭುತ್ವದ ಗೆಲುವಾಗಿದೆ. ಬಿಜೆಪಿಗೆ ದುಡಿದ ನನ್ನಂತ ನಿಷ್ಠಾವಂತರನ್ನು ಕಡೆಗಣಿಸಿದ್ದನ್ನು ಗಮನಿಸಿದ್ದ ಮತದಾರರು ಕಾಂಗ್ರೆಸ್ ಗೆ ಮತದಾನ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ’ ಎಂದಿದ್ದಾರೆ. ಮುಖಂಡರಾದ ಅಮರೇಶ್ ಕರಡಿ, ರಾಜಶೇಖರ ಆಡೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.