ADVERTISEMENT

ಗ್ರಾ.ಪಂ ಉಪಚುನಾವಣೆ: ಶ್ರೀನಿವಾಸಗೌಡಗೆ ಜಯ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:39 IST
Last Updated 29 ಮೇ 2025, 14:39 IST
ಯಲಬುರ್ಗಾ ತಾಲ್ಲೂಕು ಗಾಣದಾಳ ಗ್ರಾಮ ಪಂಚಾಯಿತಿ 1ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀನಿವಾಸಗೌಡ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು
ಯಲಬುರ್ಗಾ ತಾಲ್ಲೂಕು ಗಾಣದಾಳ ಗ್ರಾಮ ಪಂಚಾಯಿತಿ 1ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀನಿವಾಸಗೌಡ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು   

ಪ್ರಜಾವಾಣಿ ವಾರ್ತೆ

ಯಲಬುರ್ಗಾ: ತಾಲ್ಲೂಕಿನ ಗಾಣದಾಳ ಗ್ರಾಮ ಪಂಚಾಯಿತಿಯ 1ನೇ ವಾರ್ಡ್‌ನ ಸದಸ್ಯರ ರಾಜೀನಾಮೆಯಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಶ್ರೀನಿವಾಸಗೌಡ ಸಣ್ಣಹನಮಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ರಾಜೀನಾಮೆ ಸಲ್ಲಿಸಿ ಮತ್ತೊಮ್ಮ ಸ್ಪರ್ಧೆ ಬಯಸಿ ಅದೃಷ್ಟ ಪರೀಕ್ಷಿಸಿದ್ದ ಮುತ್ತಪ್ಪ ದಿಗಂಬರಗೌಡ ಮಾಲಿಪಾಟೀಲ ಈ ಸಲ ಹಿನ್ನಡೆ ಸಾಧಿಸಿದ್ದಾರೆ. ಶ್ರೀನಿವಾಸಗೌಡ ಅವರಿಗೆ 524 ಮತಗಳು ಚಲಾವಣೆಯಾದರೆ, ದಿಗಂಬರಗೌಡ ಅವರು 176 ಮತಗಳನ್ನು ಮಾತ್ರ ಪಡೆದರು. 22 ಮತಗಳು ತಿರಸ್ಕೃತಗೊಂಡವು.

ADVERTISEMENT

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪಟ್ಟಣದ ಕನಕದಾಸ ವೃತ್ತದ ಬಳಿ ಮುಖಂಡರ ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು. ಪ.ಪಂ. ಸದಸ್ಯ ವಸಂತ ಭಾವಿಮನಿ, ಮಂಜುನಾಥ ಪೊಲೀಸ್‍ಪಾಟೀಲ, ಯಂಕಪ್ಪ ಮುಖಂಪ್ಪನವರ, ಶರಣಪ್ಪ ಉರದಹುಳ್ಳಿ, ಸಣ್ಣ ಹನಮಂತಪ್ಪ ಸಂಗಟಿ, ನೂರಂದಯ್ಯ ಕುಡಗುಂಟಿ, ರಾಜೇಶ, ಕನಕನಗೌಡ, ಕುಂಟೆಪ್ಪ ವಾಲಿಕಾರ ಸೇರಿ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.